ರಾಷ್ಟ್ರೀಯ

ವಿದ್ಯುದಾಘಾತಕ್ಕೆ ಗುರಿಯಾಗಿ ಮೃತಪಟ್ಟ ಮಹಿಳಾ ಕಾನ್‌ಸ್ಟೆಬಲ್‌

Pinterest LinkedIn Tumblr

ಸಿಕಾರ್‌ : ತನ್ನ ಪೊಲೀಸ್‌ ಕ್ವಾಟರ್‌ನಲ್ಲಿ ದೋಷಯುಕ್ತ ಕೂಲರ್‌ನಿಂದ ವಿದ್ಯುದಾಘಾತಕ್ಕೆ ಗುರಿಯಾಗಿ ಮಹಿಳಾ ಕಾನ್‌ಸ್ಟೆಬಲ್‌ ಮೃತಪಟ್ಟ ಘಟನೆ ಇಲ್ಲಿ ನಡೆದಿದೆ.

ಮೃತ ಮಹಿಳಾ ಕಾನ್‌ಸ್ಟೆಬಲ್‌ ಳನ್ನು ಸಂಗೀತಾ ಎಂದು ಗುರುತಿಸಲಾಗಿದೆ. ಆಕೆ ತನ್ನ ಮನೆಯ ದೋಷ ಯುಕ್ತ ಕೂಲರ್‌ ಗೆ ನೀರು ತುಂಬುವಾಗ ವಿದ್ಯುತ್‌ ಸಂಪರ್ಕಕ್ಕೆ ಬಂದು ಆಘಾತಕ್ಕೆ ಗುರಿಯಾದರು.

ಮರಣೋತ್ತರ ಪರೀಕ್ಷೆಯ ಬಳಿಕ ಮೃತ ದೇಹವನ್ನು ಆಕೆಯ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Comments are closed.