ಅಂತರಾಷ್ಟ್ರೀಯ

ಬಹುನಿರೀಕ್ಷಿತ ಬ್ರಿಟಿಷ್ ಯುವರಾಜನ ರಾಯಲ್ ವೆಡ್ಡಿಂಗ್ ಗೆ ನಮ್ಮ ದೇಶದಿಂದ ಗೂಳಿ ಉಡುಗೊರೆ!

Pinterest LinkedIn Tumblr


ಮುಂಬಯಿ: ಬಹುನಿರೀಕ್ಷಿತ ಬ್ರಿಟಿಷ್ ರಾಯಲ್ ವೆಡ್ಡಿಂಗ್ ದಿನಾಂಕ ಸಮೀಪಿಸುತ್ತಿದ್ದು ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ನಟಿ ಮೇಗಾನ್ ಮಾರ್ಕಲ್ ಸದ್ಯದಲ್ಲಿಯೇ ಸತಿಪತಿಗಳಾಗಿ ಹೊಸಜೀವನಕ್ಕೆ ಕಾಲಿಡಲಿದ್ದಾರೆ. ವಿಶ್ವದ ಪ್ರತಿಷ್ಠಿತರನ್ನು ಮದುವೆಗೆ ಬರುವಂತೆ ಆಮಂತ್ರಿಸಲಾಗಿದ್ದು ದೇಶವಿದೇಶಗಳಿಂದ ಉಡುಗೊರೆಗಳು ಹರಿದು ಬರುತ್ತಿವೆ.

ಯುವರಾಜನ ಮದುವೆಗೆ ಉಡುಗೊರೆಯಾಗಿ ಭಾರತದಿಂದ ಕಳುಹಿಸಲಾಗುತ್ತಿರುವ ಉಡುಗೊರೆಯೊಂದು ವಿಶ್ವದ ಗಮನ ಸೆಳೆದಿದ್ದು ಜಾಗತಿಕ ಮಾಧ್ಯಮಗಳಲ್ಲಿ ಸುದ್ದಿಯ ಕೇಂದ್ರಬಿಂದುವಾಗಿದೆ. ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುವ ಪೇಟಾ ಪ್ರಿನ್ಸ್ ಹ್ಯಾರಿ ಮದುವೆಗೆ ವಿಶೇಷ ಉಡುಗೊರೆಯೊಂದನ್ನು ಕಳುಹಿಸುತ್ತಿದೆ. ಅದು ಮೆರ್ರಿ ಎಂಬ ಹೆಸರಿನ ಹೈಬ್ರಿಡ್ ಗೂಳಿ.

ಪ್ರಸ್ತು ಮಹಾರಾಷ್ಟ್ರದ ಅಭಯಾರಣ್ಯದಲ್ಲಿರುವ ಗೂಳಿ ಕತ್ತಿನ ಭಾಗಕ್ಕೆ ತೀವ್ರ ಗಾಯವಾದ ಸ್ಥಿತಿಯಲ್ಲಿ ಪೇಟಾದ ಕಾರ್ಯಕರ್ತರಿಗೆ ಸಿಕ್ಕಿತ್ತು. ಆರೈಕೆಯ ಬಳಿಕ ಗೂಳಿ ಚೇತರಿಸಿಕೊಂಡಿದ್ದು ಪ್ರಾಣಿ ಹಿಂಸೆ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜಮನೆತನದ ಮದುವೆಯಲ್ಲಿ ಉಡುಗೊರೆಯಾಗಿ ನೀಡಲಾಗುವುದು ಎಂದು ಪೇಟಾ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಇಂಗ್ಲೆಂಡಿನ ವಿಂಡ್ಸರ್ ಅರಮನೆಯಲ್ಲಿ ವೈಭೋಗದ ಮದುವೆ ಸಂಪನ್ನವಾಗಲಿದೆ.

Comments are closed.