ಕ್ರೀಡೆ

ನಿರ್ಣಾಯಕ ಪಂದ್ಯದಲ್ಲಿ ಹೊರಬಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ! ಚೆನ್ನೈಗೆ 5 ವಿಕೆಟ್ ಜಯ

Pinterest LinkedIn Tumblr

ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಟಿ 20 ಕ್ರಿಕೆಟ್ ನ ಇಂದಿನ ನಿರ್ಣಾಯಕ ಹೋರಾಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟುಗಳಿಂದ ಜಯ ಸಾಧಿಸಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು.

ಹೀಗಾಗಿ ಮೊದಲಿಗೆ ಬ್ಯಾಟಿಂಗ್ ಅವಕಾಶ ಪಡೆದ ಪಂಜಾಬ್ 19.4 ಓವರ್ ಗಳಲ್ಲಿ 153 ರನ್ ಗಳಿಸಿತು.

ಪಂಜಾಬ್ ಪರವಾಗಿ ಕರುಣ್ ನಾಯರ್ (54), ಮನೋಜ್ ತಿವಾರಿ (35), ಡೇವಿಡ್ ಮಿಲ್ಲರ್ (24) ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು.

ಚೆನ್ನೈ ಪರವಾಗಿ ಲುಂಗಿ ಎನ್‌ಗಿಡಿ ಮಾರಕ ಬೌಲಿಂಗ್ ದಾಳಿ ನಡೆಸಿ 4 ವಿಕೆಟ್ ಕಿತ್ತರೆ ಎಸ್. ಠಾಕೂರ್ ಹಾಗೂ ಬ್ರಾವೋ ತಲಾ 2 , ದೀಪಕ್ ಚಹಾರ್, ರವೀಂದ್ರ ಜಡೇಜಾ ಒಂದೊಂದು ವಿಕೆಟ್ ಪಡೆದರು.

ಪಂಜಾಬ್ ನೀಡಿದ್ದ ಸಾಧಾರಣ ಗುರಿಯನ್ನು ಬೆನ್ನತ್ತಿದ ಚೆನ್ನೈ 19.1 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಜಯಭೇರಿ ಮೊಳಗಿಸಿತು.

ಸಿಎಸ್​ಕೆ ಪರವಾಗಿ ಸುರೇಶ್ ರೈನಾ ಅರ್ಧ ಶತಕ (61) ದಾಖಲಿಸಿದರೆ ದೀಪಕ್​ ಚಾಹರ್​ 39 ರನ್​ ಪಡೆದರು.ಕಡೆಗಳಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನಾಯಕ ಧೋನಿ 16 ರನ್ ಪೇರಿಸುವ ಮೂಲಕ ತಂಡಕ್ಕೆ ಗೆಲುವಿನ ಸಿಹಿ ನೀಡಿದರು.

ಪಂಜಾಬ್ ಪರವಾಗಿ ಅಂಕಿತ್ ರಾಜಪೂತ್ ಹಾಗೂ ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಪಡೆದರೆ ಮೋಹಿತ್ ಶರ್ಮಾ 1 ವಿಕಿಎಟ್ ಗಳಿಸಿದರು.

ಭಾರೀ ಅಂತರದಿಂದ ಗೆಲ್ಲುವ ಮೂಲಕ ಪ್ಲೇ ಆಫ್ ಗೆ ಪ್ರವೇಶಿಸುವ ಕನಸು ಕಂಡಿದ್ದ ಪಂಜಾಬ್ ಈ ಸೋಲಿನಿಂದ ತೀವ್ರ ನಿರಾಸೆಯುಂಟಾಗಿದೆ.

Comments are closed.