ಕರಾವಳಿ

ಕಿಡ್ನಿಯಲ್ಲಿ ಕಲ್ಲುಗಳ ಸಮಸ್ಯೆ ನಿವಾರಣೆಗೆ ಪರಿಹಾರ

Pinterest LinkedIn Tumblr

ಇಂದಿನ ದಿನಗಳಲ್ಲಿ ಕಿಡ್ನಿಯಲ್ಲಿ ಕಲ್ಲುಗಳ ಸಮಸ್ಯೆಯಿಂದ ತುಂಬಾ ಜನ ತೊಂದರೆಅನುಭವಿಸುತ್ತಿದ್ದಾರೆ. ಈ ಸಮಸ್ಯೆಯಿಂದ ಹೊರಬರಲು ಕೆಳಗೆ ತಿಳಿಸಿದಂತೆ ಮಾಡಿದರೆ ಪರಿಹಾರ ಸಿಗುತ್ತದೆಂದು ವೈದ್ಯರು, ಆಯುರ್ವೇದ ತಜ್ಞರು ಹೇಳುತ್ತಾರೆ.

1.ಕಿಡ್ನಿಯಲ್ಲಿನ ಕಲ್ಲುಗಳು ಕರಗಲು ಒಂದು ಚಮಚ ನಿಂಬೆ ರಸ, ಜೇನುತುಪ್ಪದ ಮಿಶ್ರಣವನ್ನು ಪ್ರತಿನಿತ್ಯ ತಪ್ಪದೆ 6 ತಿಂಗಳ ಕಾಲ ಸೇವಿಸುವುದರಿಂದ ಕಿಡ್ನಿಯಲ್ಲಿ ಕಲ್ಲು ಕರಗುವುದಲ್ಲದೆ ಮತ್ತೆ ಕಿಡ್ನಿಯಲ್ಲಿ ಕಲ್ಲುಗಳು ಏರ್ಪಡುವ ಸಮಸ್ಯೆಯೇ ಇರುವುದಿಲ್ಲ.
2.ನಿಂಬೆ ರಸದಲ್ಲಿ ಸೈಂಧವ ಲವಣ ಬೆರೆಸಿ ಕುಡಿಯುವುದರಿಂದ ಮೂತ್ರ ಪಿಂಡದಲ್ಲಿ ಕಲ್ಲುಗಳು ಕರಗುತ್ತವೆ.
3.ಕಲ್ಲಂಗಡಿಯಲ್ಲಿ ಪೊಟ್ಯಾಷಿಯಂ ಅಂಶ ಹೆಚ್ಚಾಗಿರುವುದರಿಂದ ಕಲ್ಲಂಗಡಿ ಅಥವಾ ಕಲ್ಲಂಗಡಿ ರಸ ಪ್ರತಿನಿತ್ಯ ಸೇವಿಸಿದರೆ ಕಿಡ್ನಿಯಲ್ಲಿ ಕಲ್ಲುಗಳು ಕರಗಿಹೋಗುತ್ತವೆ.
4.ನೀರು, ನಿಂಬೆ ರಸ ಮಿಶ್ರಣದಲ್ಲಿ ಸ್ವಲ್ಪ ಜೇನು ತುಪ್ಪ ಅಥವಾ ಬೆಲ್ಲವನ್ನು ಬೆರೆಸಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಸೇವಿಸಿದರೆ ಕಿಡ್ನಿಯಲ್ಲಿ ಕಲ್ಲುಗಳು ಕರಗಿಹೋಗುತ್ತವೆ.
5.ವಾರದಲ್ಲಿ ಒಂದು ಬಾರಿ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ರಸ ಅಥವಾ ದಾಳಿಂಬೆ ಬೀಜ ಸೇವಿಸುವುದರಿಂದ ಒಳ್ಳೆಯ ಪರಿಹಾರ ದೊರೆಯುತ್ತದೆಯೆಂದು ಆರೋಗ್ಯ ತಜ್ಞರು ಸೂಚಿಸುತ್ತಿದ್ದಾರೆ.
6.ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುವುದರಿಂದ ಕಿಡ್ನಿಯಲ್ಲಿ ಕಲ್ಲುಗಳ ಜೊತೆ ಇತರೆ ಮಲಿನಗಳು ತೊಲಗಿಹೋಗುತ್ತವೆ.
7.ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು 10 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ. ಆ ರಸವನ್ನು ಒಂದು ಸೀಸೆಯಲ್ಲಿ ಸೋಸಿ ಫ್ರಿಡ್ಜಿನಲ್ಲಿ ಇಟ್ಟುಕೊಂಡು ಪ್ರತಿನಿತ್ಯವೂ ಸೇವಿಸಿದರೆ ಕಿಡ್ನಿಯಲ್ಲಿನ ಕಲ್ಲುಗಳು ಹೊರಹೋಗುತ್ತವೆ. ಕಿಡ್ನಿಗಳನ್ನು ಶುಚಿಗೊಳಿಸಲು ಕೊತ್ತಂಬರಿ ಸೊಪ್ಪು ಸಹಜವಾದ ಔಷಧಿ.
8.ಲೋಳೆಸರದ ರಸ ಕುಡಿದರೆ ಮೂತ್ರಪಿಂಡದಲ್ಲಿ ಕಲ್ಲುಗಳು ಏರ್ಪಡುವುದಿಲ್ಲ ಎಂದು ಸೂಚಿಸುತ್ತಿದ್ದಾರೆ.
9.ಅದೇ ರೀತಿ ಪ್ರತಿದಿನವೂ 5 ಲೀಟರಿಗೆ ಕಡಿಮೆಯಾಗದಂತೆ ನೀರು ಕುಡಿಯುವುದರಿಂದ ಕಿಡ್ನಿಯಲ್ಲಿನ ಕಲ್ಲುಗಳು ಕರಗಿ ಹೊಗುತ್ತವೆ.

Comments are closed.