ರಾಷ್ಟ್ರೀಯ

ಪಾರ್ಕ್‌ನಲ್ಲಿದ್ದ ಜೋಡಿಯತ್ತ ಕಣ್ಣು ಹಾಯಿಸಿದ ಚಾಲಕನಿಂದ ಬಸ್ ಅಪಘಾತ!

Pinterest LinkedIn Tumblr


ದುರ್ಗಾಪುರ: ಪಶ್ಚಿಮ ಬಂಗಾಳದ ದುರ್ಗಾಪುರ ಸಿಟಿ ಸೆಂಟರ್‌ನಲ್ಲಿ ಬಸ್ ಹಾಗೂ ಪಿಕಪ್ ವಾಹನದ ನಡುವೆ ಅಪಘಾತವಾಗಿದೆ. ಬಸ್ ಓಡಿಸುವ ವೇಳೆ ಚಾಲಕ ಪಾರ್ಕ್‌ನಲ್ಲಿ ಇಬ್ಬರು ಜೋಡಿಯತ್ತ ಕಣ್ಣು ಹಾಯಿಸಿದ್ದಕ್ಕೆ, ಎದುರಿಗೆ ಬರುತ್ತಿದ್ದ ವಾಹನವನ್ನು ನೋಡದೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಲ್ಲಿ 10 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮಿನಿ ಬಸ್‌ ಸವಾರನಾಗಿದ್ದ ಸುಕುಮಾರ್ ಅಪಘಾತದ ಬಗ್ಗೆ ವಿವರಿಸಿದ್ದಾನೆ. ದುರ್ಗಾಪುರ ಸ್ಟೇಷನ್‌ನಿಂದ ದುರ್ಗಾಪುರ ಸಿಟಿ ಸೆಂಟರ್‌ಗೆ ಬಸ್ ಹೋಗುತ್ತಿತ್ತು. ಈ ವೇಳೆ, ಟ್ರೋಯ್ಕಾ ಪಾರ್ಕ್ ಪ್ರದೇಶವನ್ನು ತಲುಪಿದಾಗ ಬಸ್ ಚಾಲಕ ಪಾರ್ಕ್‌ನಲ್ಲಿ ಮೈ ಮರೆತಿದ್ದ ಜೋಡಿಯತ್ತ ದೃಷ್ಟಿ ನೆಟ್ಟಿದ್ದ. ಹೀಗಾಗಿ ಎದುರಿಗೆ ಬರುತ್ತಿದ್ದ ಪಿಕಪ್ ವಾಹನವನ್ನು ಚಾಲಕ ಗಮನಿಸಲಿಲ್ಲ. ಹಾಗೂ, ಅಪಘಾತದ ಬಳಿಕ ಚಾಲಕ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಆದರೆ, ಪ್ರಯಾಣಿಕರು ಅವನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ ಎಂದು ಸುಕುಮಾರ್ ಮಾಹಿತಿ ನೀಡಿದ್ದಾರೆ.

ಇನ್ನು, ಅಪಘಾತದಲ್ಲಿ ಪಿಕಪ್ ವ್ಯಾನ್‌ನ ಚಾಲಕ ಮೊಹಮ್ಮದ್ ಅಶ್ರಫ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಲ್ಲದೆ, ನಾನು ಹಾರನ್ ಮಾಡುತ್ತಿದ್ದರೂ, ಬಸ್ ಚಾಲಕ ಗಮನಿಸಲಿಲ್ಲ. ಅಪಘಾತ ತಪ್ಪಿಸಲು ಪ್ರಯತ್ನಿಸಿದರೂ, ಸಾಧ್ಯವಾಗಲಿಲ್ಲ ಎಂದು ಪಿಕಪ್ ವ್ಯಾನ್ ಚಾಲಕ ತಿಳಿಸಿದ್ದಾನೆ.

ಸಿಟಿ ಸೆಂಟರ್ ಮಾರ್ಗದಲ್ಲಿ ವಿಜ್ಞಾನ ಮತ್ತು ಶಕ್ತಿ ಪಾರ್ಕ್ ಹಾಗೂ ಟ್ರೋಯ್ಕಾ ಪಾರ್ಕ್ ಎಂಬ ಎರಡು ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಬರುತ್ತವೆ. ಈ ಎರಡೂ ಕಡೆ, ಯುವಕ – ಯುವತಿಯರ ಜೋಡಿಗಳು ಅಸಭ್ಯ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾರೆ. ಅಲ್ಲದೆ, ಇದರತ್ತ ಹಲವು ದಾರಿಹೋಕರು ಸಹ ಕಣ್ಣು ಹಾಕಿರುತ್ತಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದು, ಹಲವರು ಪಾರ್ಕ್‌ಗಳಲ್ಲಿ ನಿಂತು ಜೋಡಿಯತ್ತ ಕಣ್ಣು ಹಾಯಿಸುವವರನ್ನು ಗಮನಿಸಿದ್ದೇನೆ. ಕೆಲವರು ತಮ್ಮ ಗಾಡಿಗಳನ್ನು ನಿಲ್ಲಿಸಿಕೊಂಡು ನೋಡುತ್ತಿರುತ್ತಾರೆ. ಬಸ್‌ಗಳಿಂದಲೂ ಇದು ಕಾಣಿಸುತ್ತಿರುತ್ತದೆ. ಅವರಿಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲವೇ ಎಂದು ಬುಂಬಾ ಘೋಷ್ ಎಂಬ ಸ್ಥಳೀಯಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.