ರಾಷ್ಟ್ರೀಯ

ವಿಶೇಷಚೇತನ ಸಹೋದರಿಗೆ ದಯಾಮರಣ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ

Pinterest LinkedIn Tumblr


ಉದಯ್‌ಪುರ: ತಂದೆಯ ಪಿಂಚಣಿ ಹಣ ಬಾರದೆ ಕಂಗಾಲಾಗಿರುವ ಕುಟುಂಬದಲ್ಲಿ ಸೋದರನೊಬ್ಬ ವಿಶೇಷಚೇತನ ಸಹೋದರಿಗೆ ದಯಾಮರಣ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಚಿತ್ತೋರ್‌ಗರ್‌ನ ಪ್ರತಾಪ್‌ನಗರದಲ್ಲಿನ ಸುಧೀರ್‌ ಮಿಶ್ರಾ ಅವರ 45 ವರ್ಷದ ಸಹೋದರಿ ಸುನಿತಾ ಮಾನಸಿಕ ಹಾಗೂ ದೈಹಿಕವಾಗಿ ಅಸ್ವಸ್ಥರಾಗಿದ್ದಾರೆ. ಅವರ ಪ್ರತಿಯೊಂದು ದೈನಂದಿನ ಕೆಲಸಗಳಿಗೂ ಒಬ್ಬರ ಸಹಾಯ ಅತ್ಯಗತ್ಯ. ತಂದೆ ವಿದ್ಯಾಪತಿ ಮಿಶ್ರಾ ಅವರು ಸರಕಾರಿ ಶಾಲೆಯಲ್ಲಿ ಅಧ್ಯಾಪಕರಾಗಿ ನಿವೃತ್ತರಾಗಿದ್ದರು. ಪಿಂಚಣಿ ಹಣದಲ್ಲಿ ಸುನಿತಾರ ಆರೈಕೆ ಮಾಡುತ್ತಿದ್ದ ವಿದ್ಯಾಪತಿ ಮಿಶ್ರಾ 2014ರಲ್ಲಿ ನಿಧನ ಹೊಂದಿದ್ದಾರೆ. ಆ ಬಳಿಕ ಸುಧೀರ್‌ ಮಿಶ್ರಾ ದಂಪತಿ ಕೆಲಸಕ್ಕೆ ರಾಜೀನಾಮೆ ನೀಡಿ ಸುನಿತಾ ಅವರ ಆರೈಕೆಯಲ್ಲಿ ತೊಡಗಿದ್ದಾರೆ.

ಸುನಿತಾ ತಂದೆಯ ಪಿಂಚಣಿ ಪಡೆಯಲು ಅಶಕ್ತರಾಗಿರುವ ಹಿನ್ನೆಲೆಯಲ್ಲಿ ಪಿಂಚಣಿ ಹಣವನ್ನು ಸುಧೀಂದ್ರ ಪಡೆಯಲು 2015ರಿಂದ ತಡಕಾಡುತ್ತಿದ್ದಾರೆ. ಸದ್ಯಕ್ಕೆ ಸ್ವಂತ ಮನೆಯ ಒಂದು ಭಾಗದಿಂದ ಬಾಡಿಗೆ ಸಂಪಾದಿಸಿ ಜೀವನ ಸಾಗಿಸುತ್ತಿದ್ದು, ಸುನಿತಾರ ವೈದ್ಯಕೀಯ ವೆಚ್ಚ ಹೊಂದಿಸಲು ಕಷ್ಟಪಡುವಂತಾಗಿದೆ. ಪಿಂಚಣಿ ಕಚೇರಿಯಲ್ಲಿ ಆಗುತ್ತಿರುವ ವಿಳಂಬದಿಂದ ಕುಟುಂಬ ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಸುನಿತಾಗೆ ದಯಾಮರಣ ನೀಡುವಂತೆ ಸೋದರ ಮನವಿ ಮಾಡಿದ್ದಾರೆ.

Comments are closed.