ರಾಷ್ಟ್ರೀಯ

ತ್ರಿಪುರವನ್ನು ಕಂಗೆಡಿಸಿದ ಪ್ರವಾಹ: ಮನೆಮಠ ಕಳೆದುಕೊಂಡ 23 ಸಾವಿರಕ್ಕೂ ಹೆಚ್ಚು ಜನ

Pinterest LinkedIn Tumblr


ಅಗರ್ತಲಾ: ತ್ರಿಪುರ ರಾಜ್ಯವನ್ನು ಕಂಗೆಡಿಸಿರುವ ಪ್ರವಾಹಕ್ಕೆ ಇಲ್ಲಿಯವರೆಗೆ 23ಸಾವಿರಕ್ಕೂ ಹೆಚ್ಚು ಜನರು ಮನೆಮಠ ಕಳೆದುಕೊಂಡಿದ್ದಾರೆ.

ಪಶ್ಚಿಮ ತ್ರಿಪುರ, ಗೋಮತಿ ಮತ್ತು ಖೊವಾಯ್‌ ಜಿಲ್ಲೆಗಳಲ್ಲಿ ಪ್ರವಾಹದ ದುಷ್ಪರಿಣಾಮ ಹೆಚ್ಚಿದ್ದು, ನಿರಾಶ್ರಿತರನ್ನು, ಅಪಾಯದಲ್ಲಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಎಂದು ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಹೇಳಿದ್ದಾರೆ.

ಪರಿಸ್ಥಿತಿ ಈಗ ಸುಧಾರಿಸುತ್ತಿದ್ದು, ನೀರು ಅಪಾಯದ ಮಟ್ಟದಿಂದ ತಗ್ಗುತ್ತಿದೆ ಎಂದು ತಿಳಿದು ಬಂದಿದೆ.

ಪ್ರವಾಹ ಪೀಡಿತರಿಗೆ ಆಹಾರ ಮತ್ತು ಇನ್ನೀತರ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದ್ದು, ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿರುವವರಿಗೆ ಆಹಾರ, ಕುಡಿಯುವ ನೀರು, ಮಕ್ಕಳಿಗೆ ಹಾಲನ್ನು ಪೂರೈಸಲಾಗುತ್ತದೆ. ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವಲ್ಲಿ ವೈದ್ಯರನ್ನು ನೇಮಿಸಲಾಗಿದೆ ಎಂದು, ಪಶ್ಚಿಮ ತ್ರಿಪುರಾ ಜಿಲ್ಲಾಧಿಕಾರಿ ಸಂದೀಪ್ ಕೆ ಮಹಾತ್ಮಾ ತಿಳಿಸಿದ್ದಾರೆ.

ತ್ರಿಪುರ ಸರ್ಕಾರ ರಾಜ್ಯಾದಂತ ಹೈ ಅಲರ್ಟ್ ಘೋಷಿಸಿದ್ದು, ಎಚ್ಚರಿಕೆಯಿಂದ ಇರುವಂತೆ ನಾಗರಿಕರಿಗೆ ಸೂಚನೆ ನೀಡಿದೆ.

ಈ ವರ್ಷ ರಾಜ್ಯದಲ್ಲಿ ಸುರಿದಿರುವ ಮುಂಗಾರು ಪೂರ್ವ ಮಳೆ, ಗುಡುಗು, ಸಿಡಿಲಿಗೆ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ. ಕನಿಷ್ಠ 24 ಜನರು ಗಾಯಗೊಂಡಿದ್ದು 10,000 ಕ್ಕೂ ಹೆಚ್ಚು ಮನೆಗಳು ಧ್ವಂಸಗೊಂಡಿವೆ.

Comments are closed.