ರಾಷ್ಟ್ರೀಯ

ಚೆನ್ನೈನಲ್ಲಿ ದಾಖಲೆಯ ಸಾರ್ವಕಾಲಿಕ ಏರಿಕೆ ಕಂಡ ಪೆಟ್ರೋಲ್ ದರ

Pinterest LinkedIn Tumblr

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ದೇಶಾದ್ಯಂತ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದು, ತೈಲ ದರ ಏರಿಕೆ ಜನಸಾಮಾನ್ಯರಿಗೆ ಭಾರಿ ಹೊರೆಯಾಗುತ್ತಿದೆ.

ಅಂತಾರಾಷ್ಟ್ರೀಯ ತೈಲ ದರ ಏರಿಕೆಯ ಪ್ರಭಾವದಿಂದ ಉಂಟಾಗಿರುವ ಹೆಚ್ಚಳ ಇನ್ನೂ ಏರುವ ಹಾದಿಯಲ್ಲೇ ಇದ್ದು, ಇಳಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

ಇಂದು ಸಹ ದೇಶಾದ್ಯಂತ ನಾಲ್ಕು ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಬೆಲೆ 30 ಪೈಸೆ ಏರಿಕಾಯಾಗಿದ್ದು, ಇದರೊಂದಿಗೆ ದೆಹಲಿ ಮತ್ತು ಮುಂಬೈ ನಂತರ ಚೆನ್ನೈನಲ್ಲೂ ದಾಖಲೆಯ ಸಾರ್ವಕಾಲಿಕ ಏರಿಕೆ ಕಂಡಿದೆ.

ಈ ಹಿಂದೆ 2013ರಲ್ಲಿ ಚೆನ್ನೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 79.55 ರುಪಾಯಿ ದಾಖಲೆಯ ಏರಿಕೆ ಕಂಡಿತ್ತು. ಸೋಮವಾರ 32 ಪೈಸೆ ಏರಿಕೆಯಾಗುವ ಮೂಲಕ 79.47 ರುಪಾಯಿ ಇದ್ದ ಪೆಟ್ರೋಲ್ ಈಗ 79.79 ರುಪಾಯಿ ತಲುಪಿದೆ.

ಮುಂಬೈನಲ್ಲಿ ಪ್ರತಿ ಲೀಟರ್ ಗೆ 84.70 ಪೈಸೆ, ದೆಹಲಿಯಲ್ಲಿ 76.87 ರುಪಾಯಿ ಹಾಗೂ ಕೋಲ್ಕತಾದಲ್ಲಿ 79.53 ರುಪಾಯಿ ಇದೆ.

Comments are closed.