ರಾಷ್ಟ್ರೀಯ

ಪೆಟ್ರೋಲ್ 40 ರೂ.ಗೆ ಯಾವಾಗ ದೊರಕುತ್ತದೆ ಎಂದು ಮೋದಿಗೆ ಪ್ರಶ್ನಿಸಿದ ಹಿರಿಯ ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ

Pinterest LinkedIn Tumblr

27
ತಿರುವನಂತಪುರ : ಪ್ರಧಾನಿ ನರೇಂದ್ರ ಮೋದಿ ಸರಕಾರ ನಾಲ್ಕು ವರ್ಷ ಪೂರೈಸಿರುವ ಸಂದರ್ಭದಲ್ಲಿ ಸಂಭ್ರಮಾಚರಣೆ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಹಿರಿಯ ಕಾಂಗ್ರೆಸ್‌ ನಾಯಕ ಉಮ್ಮನ್‌ ಚಾಂಡಿ ಅವರು ಟ್ವಿಟರ್‌ ಮೂಲಕ ಪ್ರಶ್ನೆಗಳ ಸರಮಾಲೆಯನ್ನು ಪ್ರಧಾನಿಯವರ ಉತ್ತರಕ್ಕಾಗಿ ಎಸೆದಿದ್ದಾರೆ.

“ಪ್ರಧಾನಿ ಮೋದಿಯವರೇ, ಈ ದೇಶದ ಜನರಿಗೆ ನೀವು ಕೊಟ್ಟಿರುವ ಭರವಸೆ ಪ್ರಕಾರ ಲೀಟರ್‌ಗೆ 40 ರೂ. ದರದಲ್ಲಿ ಪೆಟ್ರೋಲ್‌ ಸಿಗೋದು ಯಾವಾಗ?’ ಎಂದು ಚಾಂಡಿ ಪ್ರಶ್ನಿಸಿದ್ದಾರೆ.

”ಹಾಗೆಯೇ, ವಿದೇಶದಲ್ಲಿ ಕಪ್ಪು ಹಣ ಕೂಡಿ ಹಾಕಿರುವವರ ಪಟ್ಟಿ ಬಿಡುಗಡೆಯಾಗುವುದು ಯಾವಾಗ ? ನಿಮ್ಮ ಸರಕಾರದ ಅತೀ ಮುಖ್ಯ ಯೋಜನೆಗಳಾಗಿರುವ ಮೇಕ್‌ ಇನ್‌ ಇಂಡಿಯಾ, ಸ್ವಚ್ಚ ಭಾರತ ಅಭಿಯಾನ, ಲೋಕಪಾಲ ಮಸೂದೆ, ಭ್ರಷ್ಟಾಚಾರ ವಿರೋಧಿ ಚಳವಳಿಯ ಗತಿ ಈಗೇನಾಗಿದೆ ? ಎಂದು ದಯವಿಟ್ಟು ತಿಳಿಸಿ” ಎಂದು ಕೇರಳದ ಮಾಜಿ ಮುಖ್ಯಮಂತ್ರಿ ಚಾಂಡಿ ಪ್ರಧಾನಿ ಮೋದಿ ಅವರನ್ನು ಕೇಳಿದ್ದಾರೆ.

“ನಿಮ್ಮ ಸಂಸದೀಯ ಕ್ಷೇತ್ರವಾಗಿರುವ ವಾರಾಣಸಿ ದೇಶದ ಎರಡನೇ ಅತ್ಯಂತ ಮಾಲಿನ್ಯ ಪೀಡಿತ ನಗರವೆಂದು ಈಚಿನ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ; ಆ ಬಗ್ಗೆ ಏನಂತೀರಿ?’ ಎಂದು ಪ್ರಶ್ನಿಸಿರುವ ಚಾಂಡಿ, ನೋಟು ಅಮಾನ್ಯದಿಂದ ದೇಶಕ್ಕೆ ಏನಾದರೂ ಪ್ರಯೋಜನವಾಗಿದೆಯೇ ಎಂಬುದನ್ನು ತಿಳಿಸಿ” ಎಂದು ಆಗ್ರಹಿಸಿದ್ದಾರೆ.

ಕೇರಳದ ಎರಡು ಬಾರಿಯ ಮುಖ್ಯಮಂತ್ರಿ ಆಗಿದ್ದ ಚಾಂಡಿ ಅವರು ಆಧಾರ್‌ ಡೇಟಾಬೇಸ್‌ನಿಂದ ಮಾಹಿತಿ ಸೋರಿಕೆಯಾಗಿರುವುದು ಹೇಗೆ ? ಉತ್ತರಿಸಿ ಎಂದು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.

Comments are closed.