ಪ್ರಮುಖ ವರದಿಗಳು

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; 499 ಅಂಕ ಪಡೆದ ಮೇಘನಾ ಶ್ರೀವಾಸ್ತವ್

Pinterest LinkedIn Tumblr

ಮೇಘನಾ ಶ್ರೀವಾಸ್ತವ್

ಹೊಸದಿಲ್ಲಿ: ಕೇಂದ್ರೀಯ ಪೌಢಶಿಕ್ಷಣ ಪರೀಕ್ಷಾ ಮಂಡಳಿಯ (ಸಿಬಿಎಸ್‌ಇ) 12ನೇ ತರಗತಿ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಶೇ.83ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ವೆಬ್‌ಸೈಟ್‌ಗಳಲ್ಲಿ ಫಲಿಂತಾಶ ಲಭ್ಯ

1) cbseresults.nic.in
2) cbse.nic.in

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಫಲಿತಾಂಶದಲ್ಲಿ ಅಲ್ಪ ಏರಿಕೆ ಕಂಡಿದೆ. 2016-17ರ ಸಾಲಿನಲ್ಲಿ ಶೇ. 82.02 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ ಶೇ.83.02 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ನೋಯ್ಡಾದ ಸ್ಟೆಪ್ ಬೈ ಸ್ಟೆಪ್ ಶಾಲೆಯ ವಿದ್ಯಾರ್ಥಿನಿ ಮೇಘನಾ ಶ್ರೀವಾಸ್ತವ್ ಅವರು 500 ಅಂಕಗಳ ಪೈಕಿ 499 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ. ಘಾಜಿಯಾಬಾದ್‌ನ ಎಸ್‌ಎಜೆ ಶಾಲೆಯ ಅನುಷ್ಕಾ ಚಂದ್ರ 498 ಅಂಕ ಪಡೆದು ದ್ವೀತಿಯ ಸ್ಥಾನದಲ್ಲಿದ್ದರೆ, 497 ಅಂಕ ಪಡೆಯುವ ಮೂಲಕ 7 ವಿದ್ಯಾರ್ಥಿಗಳು ತೃತೀಯ ಸ್ಥಾನದಲ್ಲಿದ್ದಾರೆ. ಈ ಪೈಕಿ ಘಾಜಿಯಾಬಾದ್‌ನ ಇಬ್ಬರು, ಜೈಪುರ್, ಲುಧಿಯಾನಾ, ಹರಿದ್ವಾರ, ನೋಯ್ಡಾ ಹಾಗೂ ಮೀರತ್‌ನ ತಾಲಾ ಒಬ್ಬರು ಸ್ಥಾನ ಪಡೆದಿದ್ದಾರೆ.

CBSE ಫಲಿತಾಂಶ ನೋಡಲು ಹೀಗೆ ಮಾಡಿ

15,674 ಅನಿವಾಸಿ ಭಾರತೀಯ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಈ ಪೈಕಿ 14,881 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

88.31% ರಷ್ಟು ಫಲಿತಾಂಶ ದಾಖಲಿಸುವ ಮೂಲಕ ವಿದ್ಯಾರ್ಥಿಯರೇ ಮೈಲುಗೈ ಸಾಧಿಸಿದ್ದು, ವಿದ್ಯಾರ್ಥಿಗಳಲ್ಲಿ 78.99% ಪಾಸಾಗಿದ್ದಾರೆ.

ದೇಶಾದ್ಯಂತ 11 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 2017-18ನೇ ಸಾಲಿನಲ್ಲಿ ಪರೀಕ್ಷೆ ಎದುರಿಸಿದ್ದರು. ಪ್ರಶ್ನೆಪತ್ರಿಕೆ ಬಹಿರಂಗವಾದ ಹಿನ್ನೆಲೆಯಲ್ಲಿ, ಏ.25ರಂದು 12ನೇ ತರಗತಿ ಅರ್ಥಶಾಸ್ತ್ರ ವಿಷಯದ ಮರುಪರೀಕ್ಷೆ ನಡೆಸಲಾಗಿತ್ತು.

’10ನೇ ತರಗತಿ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಗಿದಿದ್ದು, ಇನ್ನೆರಡು ದಿನಗಳಲ್ಲಿ 10ನೇ ತರಗತಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ’ ಎಂದು ಸಿಬಿಎಸ್‌ಇ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

Comments are closed.