ರಕ್ಷಿತ್ ಶೆಟ್ಟಿ, ಪರಂವಾ ಸ್ಟುಡಿಯೋದಡಿ “777 ಚಾರ್ಲಿ’ ಎಂಬ ಚಿತ್ರವನ್ನು ನಿರ್ಮಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರ ಜೂನ್ ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.
ಕಿರಣ್ ರಾಜ್ ಎನ್ನುವವರು “777 ಚಾರ್ಲಿ’ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆಯೊಂದಿಗೆ ನಿರ್ದೇಶನ ಮಾಡುತ್ತಿದ್ದಾರೆ ಕಿರಣ್ ರಾಜ್. ಇದು ಮನುಷ್ಯ ಹಾಗೂ ಪ್ರಾಣಿಯ ಬಾಂಧವ್ಯದ ಸುತ್ತ ನಡೆಯುವ ಸಿನಿಮಾ. ಯಾವುದೋ ಒಂದು ಕಾರಣಕ್ಕೆ ಡಿಪ್ರೆಸ್ ಆಗಿ ಏಕಾಂಗಿಯಾಗಿರುವ ನಾಯಕನಿಗೆ ನಾಯಿಯೊಂದು ಸಿಗುತ್ತದೆ.
ಆ ನಾಯಿ ಆತನ ಲೈಫ್‍ಗೆ ಎಂಟ್ರಿಕೊಟ್ಟ ತಕ್ಷಣ ಆತ ಸಂಪೂರ್ಣ ಬದಲಾಗುತ್ತಾನೆ. ಆ ಬದಲಾವಣೆಗೆ ಕಾರಣ ಏನು, ಆ ಪ್ರಕ್ರಿಯೆಯಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದು ಚಿತ್ರದ ಕಥೆ. ಚಿತ್ರಕ್ಕೆ ನಾಬಿನ್ ಪೆಲ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.
Comments are closed.