ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರಿ ಕಾರು ಬಳಸದಿರಲು ನಿರ್ಧರಿಸಿದ್ದಾರೆ. ಚುನಾವಣೆ ಫಲಿತಾಂಶ ಬಂದಾಗಿನಿಂದ ಬಳಸುತ್ತಿರುವ ನೀಲಿ ಬಣ್ಣದ ರೇಂಜ್ ರೋವರ್ ಕಾರನ್ನೇ ಅವರು ಉಪಯೋಗಿಸಲು ತೀರ್ಮಾನಿಸಿದ್ದಾರೆ.
ಫಲಿತಾಂಶ ಬರುವ ಹಿಂದಿನ ದಿನದವರೆಗೆ ಎಚ್.ಡಿ. ಕುಮಾರಸ್ವಾಮಿ ಅವರು ಬಿಳಿ ಬಣ್ಣದ ಟೊಯೋಟಾ ಫಾರ್ಚುನರ್ ಕಾರು ಬಳಸುತ್ತಿದ್ದರು. ಫಲಿತಾಂಶ ಪ್ರಕಟವಾದ ದಿನ ಮಧ್ಯಾಹ್ನ ಮೈತ್ರಿ ಸರ್ಕಾರ ರಚನೆ ಬಗ್ಗೆ ಚರ್ಚಿಸಲು ಎಚ್.ಡಿ. ದೇವೇಗೌಡರ ನಿವಾಸಕ್ಕೆ 0002 ನಂಬರ್ನ ರೇಂಜ್ ರೋವರ್ ಕಾರು ಕೊಂಡೊಯ್ದಿದ್ದ ಕುಮಾರಸ್ವಾಮಿ ಅವರು, ಅಂದಿನಿಂದ ಇಲ್ಲಿ ವರೆಗೆ ಅದೇ ಕಾರನ್ನೇ ಬಳಸುತ್ತಿದ್ದಾರೆ.
ಹೀಗಿರುವಾಗಲೇ ಡಿಪಿಎಆರ್ ಇಲಾಖೆಯಿಂದ ಕಾರು ನೀಡಿದರೂ ಬಳಸಲು ನಿರಾಕರಿಸಿರುವ ಕುಮಾರಸ್ವಾಮಿ ಅವರು ಸರ್ಕಾರಿ ವಾಹನ ಬೇಡ ಎಂದು ಮೌಖಿಕವಾಗಿ ತಿಳಿಸಿದ್ದಾರೆ.
0002 ನಂಬರ್ನ ನೀಲಿ ಬಣ್ಣದ ರೇಂಜ್ ರೋವರ್ ಕಾರ್ ಬಳಸಲು ಆರಂಭಿಸಿದ ಮೇಲೆ ಕುಮಾರಸ್ವಾಮಿ ಅವರಿಗೆ ಯಶಸ್ಸು ಸಿಕ್ಕಿದೆ ಎನ್ನಲಾಗಿದ್ದು, ಮುಂದೆಯೂ ಅದೇ ಕಾರನ್ನು ಉಪಯೋಗಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
Comments are closed.