ಆರೋಗ್ಯ

4 ದಿನದ ಮಗುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ; ಮಣಿಪಾಲ ಆಸ್ಪತ್ರೆಯ ಯಶಸ್ವಿ ಕಾರ್ಯ

Pinterest LinkedIn Tumblr

ಉಡುಪಿ: ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ| ಅರವಿಂದ ಬಿಷ್ಣೋಯ್‌ ಅವರ ತಂಡದಿಂದ ನಾಲ್ಕು ದಿನದ ಮಗುವಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಗರ್ಭಾವಸ್ಥೆ ಯಲ್ಲಿರುವಾಗ ಸ್ತ್ರೀರೋಗ ಮತ್ತು ಹೆರಿಗೆ ವಿಭಾಗ ಮುಖ್ಯಸ್ಥ ಡಾ| ಮುರಳೀಧರ ಪೈ ಅವರು ಕೆಲವು ನ್ಯೂನತೆಗಳನ್ನು ಪತ್ತೆ ಮಾಡಿದ್ದರು. ಬಳಿಕ ಭ್ರೂಣವು ದೊಡ್ಡ ಅಪಧಮನಿಗಳ ವರ್ಗಾವಣೆ ಹೊಂದಿದ ನ್ಯೂನತೆ ತಿಳಿಯಿತು.

ರೋಗ ಪತ್ತೆ ಮೊದಲೇ ತಿಳಿದ ಕಾರಣ ಜನನವಾದ ತತ್‌ಕ್ಷಣ ವೈದ್ಯರು ಕಾರ್ಯಪ್ರವೃತ್ತರಾದರು. ನವಜಾತ ಶಿಶು ತಜ್ಞ ಡಾ| ಲೆಸ್ಲಿ ಲೂಯಿಸ್‌ ಅವರ ತಂಡ ಪರೀಕ್ಷೆ ಮಾಡಿದಾಗ ರಕ್ತದಲ್ಲಿ ಆಮ್ಲಜನಕ ಕಡಿಮೆಯಾಗಿರುವುದು ಕಂಡುಬಂತು ಮತ್ತು ಚರ್ಮ ನೀಲಿ ಬಣ್ಣಕ್ಕೆ ತಿರುಗುವುದರಲ್ಲಿತ್ತು. ತತ್‌ಕ್ಷಣ ಔಷಧಿ ಆರಂಭಿಸಿ ನಾಲ್ಕು ದಿನದ ಪುಟಾಣಿಗೆ ಶಸ್ತ್ರ ಚಿಕಿತ್ಸೆ ಮಾಡಲು ವೈದ್ಯರು ನಿರ್ಧರಿಸಿದರು.

ಡಾ| ಬಿಷ್ಣೋಯ್‌ ಅವರ ತಂಡ ಸತತ ಮೂರೂವರೆ ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಸಾಮಾನ್ಯ ಅಪಧಮನಿಗಳನ್ನು ಬದಲಿಸಲು ಯಶಸ್ವಿಯಾಯಿತು.

Comments are closed.