ರಾಷ್ಟ್ರೀಯ

ಜೈಲಲ್ಲೇ ವಸ್ತ್ರವಿನ್ಯಾಸ ಕಲಿಯುತ್ತಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್‌ನ ದತ್ತು ಪುತ್ರಿ ಹನಿಪ್ರೀತ್

Pinterest LinkedIn Tumblr


ಚಂಡೀಗಢ್: ಅತ್ಯಾಚಾರ ಪ್ರಕರಣದಲ್ಲಿ ಕಂಬಿ ಎಣಿಸುತ್ತಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್‌ನ ದತ್ತು ಪುತ್ರಿ ಎನ್ನಿಸಿಕೊಂಡಿರುವ ಹನಿಪ್ರೀತ್ ಸಿಂಗ್ ಜೈಲಿನಲ್ಲಿ ವಸ್ತ್ರ ವಿನ್ಯಾಸ, ಬ್ಲಾಕ್ ಪ್ರಿಂಟಿಂಗ್ ಹಾಗೂ ಸೌಂದರ್ಯ ಸಲಹೆಗಳ ತರಬೇತಿ ಪಡೆಯುತ್ತಿದ್ದಾಳೆ.

2017ರ ಅಗಸ್ಟ್‌ 25ರಂದು ಗುರ್ಮೀತ್ ರಾಮ್ ರಹೀಂ ಸಿಂಗ್ ದೋಷಿ ಎಂದು ಪಂಚಕುಲ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದ ಬಳಿಕ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣಾ ಪೊಲೀಸರು ಹನಿಪ್ರೀತ್‌ರನ್ನು ಬಂಧಿಸಿ ಜೈಲಿಗಟ್ಟಿದ್ದರು.

ಅಂಬಾಲಾ ಮೂಲದ ಕೌಶಲ್ಯ ಅಭಿವೃದ್ಧಿ ಸಂಸ್ಥೆಯೂ ಅಂಬಾಲ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ (ಡಿಎಸ್‌ಎಲ್‌ಎ) ಮೇಲ್ವಿಚಾರಣೆಯಲ್ಲಿ ಈ ತರಬೇತಿ ಶಿಬಿರ ನಡೆಯುತ್ತಿವೆ.

ಈ ರೀತಿಯ ಕೌಶಲ್ಯ ಚಟುವಟಿಕೆ ತರಬೇತಿಗಳನ್ನು ವರ್ಷವಿಡಿ ಆಯೋಜಿಸಲಾಗಿದ್ದು, ಜೈಲುಹಕ್ಕಿಗಳ ಶಿಕ್ಷೆಯ ಅವಧಿ ಮುಗಿಯುವವರೆಗೂ ಅವರಿಗೆ ತರಬೇತಿ ನೀಡಬೇಕೆಂಬ ಉದ್ದೇಶ ಹೊಂದಿದ್ದೇವೆ. ಸ್ಥಾನಗಳ ಲಭ್ಯತೆಯ ಆಧಾರದ ಮೇಲೆ ವಿಚಾರಣಾಧೀನ ಕೈದಿಗಳಿಗೂ ಸಹ ತರಬೇತಿ ಪಡೆಯುವ ಅವಕಾಶ ಕಲ್ಪಿಸುತ್ತೇವೆ ಎಂದು ಹರಿಯಾಣಾದ ಐಜಿಪಿ (ಕಾರಾಗೃಹ) ಜಗ್ಜೀತ್ ಸಿಂಗ್ ತಿಳಿಸಿದ್ದಾರೆ.

Comments are closed.