ಮನೋರಂಜನೆ

ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿರುವ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ; ಅನಂತ್ ನಾಗ್-ರಾಧಿಕಾ ಚೇತನ್ ಅಭಿನಯಕ್ಕೆ ಫಿದಾ

Pinterest LinkedIn Tumblr

ಬೆಂಗಳೂರು: ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಮತ್ತು ರಾಧಿಕಾ ಚೇತನ್‌ ಅಭಿನಯದ ವಿಭಿನ್ನ ಕಥೆಯ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ಸಿನಿ ರಸಿಕರ ಮನ ಗೆದ್ದಿದ್ದು, ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ.

ಕಲರ್ಸ್ ಆಫ್ ಆನೇಕಲ್ ಹೆಸರಿನಲ್ಲಿ ಸುದರ್ಶನ್, ರಾಮಮೂರ್ತಿ ಹಾಗು ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ, ಗಾಯಕರು ಆಗಿರುವ ಹರೀಶ್ ಶೇರಿಗಾರ್ ಅವರ ಆಕ್ಮೇ ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರ್ನಡಿಯಲ್ಲಿ ನಿರ್ಮಿಸಲಾಗಿರುವ ಈ ಸಿನೆಮಾವನ್ನು ನರೇಂದ್ರ ಬಾಬು ನಿರ್ದೇಶಿಸಿದ್ದಾರೆ.

ಕನ್ನಡ ಸಿನೆಮಾ ರಂಗದಲ್ಲಿ ಈ ವರೆಗೂ ಯಾರು ಮಾಡದಂತೆ ಕಥೆಯನ್ನಿಟ್ಟುಕೊಂಡು ಮಾಡಿರುವ ಈ ಸಿನೆಮಾಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನೆಮಾದ ಬಗ್ಗೆ ಬಹುತೇಕ ಮಾಧ್ಯಮಗಳು ಕೂಡ ಒಳ್ಳೆಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದು, ಅನಂತ್‌ ನಾಗ್‌ ಮತ್ತು ರಾಧಿಕಾ ಚೇತನ್‌ ಅಭಿನಯಕ್ಕೆ ಜೈ ಎಂದಿದೆ.

ಈ ವಾರ ಗಾಂಧಿನಗರಕ್ಕೆ ಎಂಟ್ರಿಕೊಟ್ಟ ಈ ಸಿನೆಮಾವನ್ನು ಕನ್ನಡ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.

`ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಟೈಟಲ್ ಮೂಲಕವೇ ಕ್ಯೂರಿಯಾಸಿಟಿ ಮೂಡಿಸಿದಂಥಹ ಸಿನಿಮಾ. ಸ್ಟೇಬಲ್ ಅಂಡ್ ಸೆಟಲ್ ಆ್ಯಕ್ಟಿಂಗ್‍ನಿಂದ ಅನಂತ್‍ನಾಗ್ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಬಾಸ್ ಪಾತ್ರದಲ್ಲಿ ಮಿಂಚಿರುವ ರಾಧಿಕಾ ಪ್ರತಿ ಫ್ರೇಮ್‍ನಲ್ಲೂ ಮುದ್ದಾಗಿ ಕಾಣಿಸಿಕೊಂಡು ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ. ಈ ಎರಡು ಕ್ಯಾರೆಕ್ಟರ್‍ಗಳು ಸಿನಿಮಾದ ಮೂಲ ಆಕರ್ಷಣೆಯಾಗಿದೆ.

ಕಾರ್ಪೋರೇಟ್ ಬದುಕಿನ ಒದ್ದಾಟ, ಲಿವಿಂಗ್ ಟುಗೇದರ್ ರಿಲೇಷನ್‍ಶಿಪ್ ಪೀಕಲಾಟ, ಜತೆಗೆ ಓಲ್ಡೇಜ್ ಒಂಟಿತನದ ಹೋರಾಟದ ಸುತ್ತ ಸುತ್ತುವ ಈ ಸಿನಿಮಾ, ಮಾಸ್, ಆ್ಯಕ್ಷನ್, ಲವ್ ಚಿತ್ರಗಳನ್ನು ನೋಡಿ ಬೇಸರವಾದವ್ರಿಗೆ ಇಷ್ಟವಾಗುತ್ತದೆ. ರಾಮಚಂದ್ರ ಹಡಪದ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಹಾಗೂ ಹಿನ್ನಲೆ ಸಂಗೀತ ಪ್ರೇಕ್ಷಕರನ್ನ ಕಾಡುತ್ತವೆ. ಛಾಯಾಗ್ರಾಹಕ ಪಿ.ಕೆ.ಎಚ್. ದಾಸ್ ಅವರ ಛಾಯಾಗ್ರಹಣ ಸಿನೆಮಾಗೆ ಇನ್ನಷ್ಟು ಮೆರುಗು ತಂದುಕೊಟ್ಟಿದೆ.

ಲಿವ್-ಇನ್ ರಿಲೇಶನ್ ಶಿಪ್ ಮೇಲೆ ಒಲವು ತೋರುತ್ತಿರುವ ಈಗಿನ ಯುವ ಜನಾಂಗಕ್ಕೆ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾದಲ್ಲಿ ಒಂದೊಳ್ಳೆ ಸಂದೇಶ ಇದೆ. ಜನರೇಷನ್ ಗ್ಯಾಪ್ ಅಂತೆಲ್ಲ ಬೊಬ್ಬೆ ಹೊಡೆಯುವವರಿಗೂ ಈ ಚಿತ್ರದಲ್ಲಿ ಉತ್ತಮ ಮೆಸೇಜ್ ಇದೆ.

ಆಧುನಿಕ ಜೀವನಶೈಲಿ ಮತ್ತು ಒತ್ತಡ ಎರಡು ಸೂಕ್ಷ್ಮ ಅಂಶ ಚಿತ್ರದಲ್ಲಿ ಅನಾವರಣವಾಗಿದೆ. ಒಟ್ಟಿನಲ್ಲಿ `ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ಅರ್ಥಪೂರ್ಣ ಮಹತ್ವ ತಿಳಿದುಕೊಂಡು ಪ್ರೇಕ್ಷಕರು ಸಿನಿಮಾಗೆ ಜೈ ಎಂದಿದ್ದಾರೆ.

Comments are closed.