ಗಲ್ಫ್

ಸಾಮಾಜಿಕ ಐಕ್ಯತೆ, ಕೋಮು ಸೌಹಾರ್ದತೆಗೆ ಸಾಕ್ಷಿಯಾದ BCF ಇಫ್ತಾರ್ ಮೀಟ್ 2018- ಅಭೂತ ಪೂರ್ವ ಬೆಂಬಲವನ್ನು ಪಡೆದ BCF ಸ್ಕಾಲರ್ಷಿಪ್ 2018

Pinterest LinkedIn Tumblr

ಬ್ಯಾರೀಸ್ಫೋ ಕಲ್ಚರಲ್ ಫೋರಮ್ ( ಬಿಸಿಫ್) ವತಿಯಿಂದ ದಿನಾಂಕ 19 / 5 / 2018 ನೇ ಶುಕ್ರವಾರ ದುಬೈಯ ಊದ್ ಮೆಥ ರೋಡ್ ನಲ್ಲಿ ಇರುವ ಇರಾನಿಯನ್ ಕ್ಲಬ್ ಸಭಾಂಗಣದಲ್ಲಿ ಅದ್ದೂರಿಯ BCF ಇಫ್ತಾರ್ ಮೀಟ್ 2018 ನರವೇರಿತು.

UAE ಯಲ್ಲಿ ಇರುವ ಅನಿವಾಸಿ ಕನ್ನಡಿಗರು, ಜಾತಿ ಮತ ಭೇದವಿಲ್ಲದೆ ಪಾಲ್ಗೊಂಡ ಈ ಇಫ್ತಾರ್ ಕೂಟದಲ್ಲಿ ಸರಿ ಸುಮಾರು 900 ರಷ್ಟು ಕನ್ನಡಿಗರು ಹಾಜರಿದ್ದರು. ಸ್ತ್ರೀಯರಿಗೆ ಪ್ರತ್ಯೇಕವಾದ ಸೀಟಿಂಗ್ ವ್ಯವಸ್ಥೆ ಏರ್ಪಡಿಸಿದ್ದು ಗಣನೀಯ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.

ಪ್ರಥಮವಾಗಿ ಮಾಸ್ಟರ್ ಫವಾಜ್ ರಿಂದ ಕಿರಾತ್ ಪಠನವಾದ ನಂತರ ಜನಾಬ್ ಇಬ್ರಾಹಿ ದುಬಾಲ್ ರ ನೇತೃತ್ವದಲ್ಲಿ ಇಸ್ಲಾಮಿಕ್ ಕ್ವಿಜ್ ನಡೆಸಿ ಕೊಡಲಾಯಿತು. ತದ ನಂತರ ಕಿರಾತ್ ಸ್ಪರ್ಧೆಯನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಡಾ B K ಯೂಸುಫ್, ಡಾ ಕಾಪು ಮಹಮದ್, , ಜನಾಬ್ ಎಂ.ಈ,.ಮೂಳೂರು ಹಾಗೂ ಜನಾಬ್ ಅಬ್ದುಲ್ ಲತೀಫ್ ಮುಳ್ಕಯ್ ಬಹುಮಾನ ವಿತರಿಸಿದರು.

ಇಫ್ತಾರ್ ಗಿಂತ ಮೊದಲು KCF ನಾಯಕ ಉಸ್ತಾದ್ ಮೆಹಬೂಬ್ ಸಖಾಫಿಯವರಿಂದ ರಾಮಜಲಾನಿನ ಮಹತ್ವದ ಕುರಿತು ಪ್ರಭಾಷಣ ನೀಡಲಾಯಿತು. ಅವರು BCF ಕಳೆದ 17 ವರುಷಗಳಿಂದ ನಡೆಸಿಕೊಂಡು ಬರುತ್ತಿರುವ ಇಫ್ತಾರ್ ಹಾಗೂ ಸಚಿವ್ಲರ್ಶಿಪ್ ಯೋಜನೆಯ ಕುರಿತು ಮೆಚ್ಚುಗೆಯ ಮಾತನ್ನಾಡಿದರು.

DKSC ಗೌರವಾಧ್ಯಕ್ಷ ಸಯ್ಯದ್ ತಾಹಾ ಬಾಫಖಿ ತಂಗಳ್ ರವರಿಂದ ದುವಾ ನೆರವೇರಲ್ಪಟ್ಟಿತು.

ಇಫ್ತಾರ್ ಕಳೆದ ನಂತರಾವ್ ಮಗ್ರಿಬ್ ನಮಾಜಿನ ಬಳಿಕ ನಡೆದ ಸಭಾ ಕಾರ್ಯಕ್ರಮ BCF ಅಧ್ಯಕ್ಳಶರಾದ ಡಾ B K ಯೂಸುಫ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. BCF ಪ್ರಧಾನ ಕಾರ್ಯದರ್ಶಿ ಡಾ ಕಾಪು ಮಹಮದ್ ವಿಶೇಷ ಅತಿಥಿಗಳನ್ನು ವೇದಿಕೆಗೆ ಬರಮಾಡಿ ಕೊಂಡರು.

ಮಾಸ್ಟರ್ ಫವಾಜ್ ರವರ ಕಿರಾತ್ ನೊಂದಿಗೆಚ್ ಸಭಾ ಕಾರ್ಯಕ್ರಮ ಪ್ರಾರಂಭ ಗೊಂಡಿತು.

BCF ಉಪಾಧ್ಯಕ್ಷ ಹಾಗೂ BCF ಸ್ಕಾಲರ್ಷಿಪ್ ಕಮಿಟಿ ಚಯರ್ಮನ್ ಜನಾಬ್ ಎಂ ಈ ಮೂಳೂರು ರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ BCF ಇದರ ಸ್ಥೂಲ ಪರಿಚಯ ನೀಡಿದರು. ಕಳೆದ 14 ವಾಯೆಶಗಳಲ್ಲಿ BCF ಸುಮಾರು 10000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದ್ದು ಅನಿವಾಸಿ ಕನ್ನಡಿಗ ಸಂಸ್ಥೆಗಳು ನಡೆಸುವ ಸ್ಕಾಲರ್ಷಿಪ್ ಯೋಜನೆಗಳಲ್ಲಿ BCF ಸ್ಕಾಲರ್ಷಿಪ್ ಕಾರ್ಯಕ್ರಮವು ಅತೀ ದೊಡ್ಡ ಯೋಜನೆಯೆಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದರು. BCF ನಿಂದ ಸ್ಕಾಲರ್ಷಿಪ್ ಪಡೆದ ಅದೆಷ್ಟೋ ಬಡ ಕುಟುಂಬದ ವಿದ್ಯಾರ್ಥಿಗಳು ಇಂದು ವೈದ್ಯಕೀಯ, ತಾಂತ್ರಿಕ , ಕಾನೂನು, ಮೊದಲಾದ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡಿ ಉದ್ಯೋಗದಲ್ಲಿ ತಮ್ಮನು ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು. BCF ಸ್ಕಾಲರ್ಷಿಪ್ 2018 ಕಾರ್ಯಕ್ರಮಕ್ಕೆ ಎಲ್ಲರ ಸಹಕಾರವನ್ನು ಕೋರಿದರು.

BCF ಇಫ್ತಾರ್ ಸಮಿತಿ ಚಯರ್ಮನ್ ಜನಾಬ್ ತಮ್ಮ ಭಾಷಣದಲ್ಲಿ BCF ಇಫ್ತಾರ್ ಕಾರ್ಯಕ್ರಮಕ್ಕೆ ಸಹಾಕ್ಲಾರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಇಂತಹ ಪಾವಿತ್ತ್ರ ಕಾರ್ಯದ ಮುಂದಾಳುತ್ವ ವಹಿಸುವರೇ ತಮಗೆ ಅವಕಾಶ ನೀಡಿದ್ದಕ್ಕಾಗಿ ಬಿಸಿಫ್ ಗೆ ತನ್ನ ಧನ್ಯವಾದವನ್ನು ಸಲ್ಲಿಸುತ್ತಾ ತನಗೆ ಸಹಕರಿಸಿದ ಬಿಸಿಫ್ ಇಫ್ತಾರ್ ಸಮಿತಿಯ ಎಲ್ಲ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.

ಡಾ B K ಯೂಸುಫ್ ರವರು ತಮ್ಮ ಅಧ್ಯಕ್ಷೀಯ ಭಾಷಣ ದಲ್ಲಿ ಸೇರಿದ ಎಲ್ಲರಿಗೆ ರಾಮಜಲಾನ್ ಶುಭಾಶಯವನ್ನು ಕೋರುತ್ತಾ ಇಫ್ತಾರ್ ಎಂದರೆ ಬರಿಯ ಆಹಾರ ನೀರನ್ನು ಮಾತ್ರ ತೊರೆಯುವುದಲ್ಲ ಅದರೊಂದಿಗೆ ಮನಸ್ಸು ಮತ್ತು ಹೃದಯವನ್ನು ಕೂಡಾ ಕೆಟ್ಟ ವಿಷಯಗಳಿಂದ ದೂರವಿಟ್ಟು ಮಾನಸಿಕ ಮತ್ತು ದೈಹಿಕ ಸಾಕ್ಷಾತ್ಕಾರ ನಿಜವಾದ ಉಪವಾಸ ಎಂದು ತಿಳಿಸಿದರು. ಇಫ್ತಾರ್ ಚಯರ್ಮನ್ ಮತ್ತು ಸದಸ್ಯರಿಗೆ ಧನ್ಯವಾದ ಅರ್ಪಿಸಿದರು.

ಅಂದಿನ ಪ್ರಧಾನ ಅತಿಥಿಗಳಾದ ಜನಾಬ್ ರಿಜ್ವಾನುಳ್ಳ ಖಾನ್, ಜನಾಬ್ ಅಬ್ದುಲ್ ಜಲೀಲ್ ಉದ್ಯಾವರ, ಜನಾಬ್ ಷರೀಫ್ ಮುಂಡೂಲ್, ಜನಾಬ್ ನೌಫಾಲ್ ಮೊದಲಾದ ಗಣ್ಯರು ತಮ್ಮ ಭಾಷಣಗಳಲ್ಲಿ BCF ಸಂಸ್ಥೆಯ ಸಮಾಜ ಸೇವಾ ಕಾರ್ಯಗಳನ್ನೂ BCF ನ ಎಲ್ಲಾ ಕಾರ್ಯಕ್ರಮಗಳಲ್ಲಿ ಎದ್ದು ತೋರುವ ಶಿಸ್ತನ್ನೂ ಮನಸಾರೆ ಹೊಗಳಿದರು.

ಈ ಸಂಧರ್ಭದಲ್ಲಿ ಈ ಮೇಲೆ ಹೇಳಿದ ಎಲ್ಲ ಮುಖ್ಯ ಅತಿಥಿಗಳನ್ನೂ ಹಾಗೂ ಇರಾನಿಯನ್ ಕ್ಲಬ್ ಇದರ ಮ್ಯಾನೇಜರ್ ರವರನ್ನೂ ಸೂಕ್ತ ರೀತಿಯಲ್ಲಿ ಶಾಲು ಮತ್ತು ಸ್ಮರಣಿಕೆಯೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಡಾ B K ಸಾದಿಕ್ , ಉಸ್ತಾದ್ ಮೆಹಬೂಬ್ ಸಖಾಫಿ, ಉಸ್ತಾದ್ ಅಬ್ದುಲ್ಲಾ ಕುಡಿತಮೊಗೆರು, ಜನಾಬ್ ಅಶ್ರಫ್ K M ., ಜನಾಬ್ ಇಕ್ಬಾಲ್ ಕಾಜೂರು, ಜನಾಬ್ ಯೂಸುಫ್ ಅರ್ಲಪದವು, ಜನಾಬ್ ಶುಕೂರ್ ಮನಿಲಾ, Mr ಜೇಮ್ಸ್ ಮೆಂಡೋನ್ಸಾ, Mr . ನಾವೆಲ್ ಅಲ್ಮೇಡಾ, ಜನಾಬ್ ಇರ್ಷಾದ್ ಮೂಡಬಿದ್ರಿ , ಅಡ್ವೋಕೇಟ್ ಅಬ್ದುಲ್ ಅಝೀಜ್, , , ಜನಾಬ್ ಇಕ್ಬಾಲ್ ಕುಂದಾಪುರ,. ಮೊದಲಾದವ ಗಣ್ಯರು ಉಪಸ್ಥಿತರಿದ್ದರು. ಮಾಧ್ಯಮದ ಪ್ರತಿನಿಧಿಗಳಾಗಿ Mr . ಕಿರಣ್ , Mr . ಇಮ್ರಾನ್, ಮೊದಲಾದವರು ಉಪಸ್ಥಿತರಿದ್ದರು.

ತದ ನಂತರ ನಡೆದ ಸ್ಕಾಲರ್ಷಿಪ್ ಪ್ರಸ್ತಾವನಾ ಕಾರ್ಯಕ್ರಮದಲ್ಲಿ ಡಾ ಕಾಪು ಮಹಮದ್ ರವರು ಸ್ಕಾಲರ್ಷಿಪ್ ಬಗೆಗೆ ಸ್ಥೂಲವಾದ ಪರಿಚಯವನ್ನು ನೀಡಿದರು. PUC ಯಿಂದ ತೊಡಗಿ ಸ್ನಾತಕೋತ್ತರ, ಮೆಡಿಕಲ್, ಇಂಜಿನಿಯರಿಂಗ್, ಡಿಪ್ಲೋಮ, ನರ್ಸಿಂಗ್, ಉಲೇಮಾ , ಫಾರ್ಮ, ಲಾ ಮೊದಲಾದ ಸುಮಾರು 32 ವಿವಿಧ ಕೋರ್ಸ್ ಗಳಿಗೆ ಸ್ಕಾಲರ್ಷಿಪ್ ಅನ್ನು ಕೋರಲಾಯಿತು. ಅಂದು ಸೇರಿದ ಅತಿಥಿಗಳು ಮತ್ತು ಸಭಿಕರಿಂದ ಉತ್ತಮವಾದ ಬೆಂಬಲದ ಭರವಸೆಯನ್ನು ಪಡೆಯಲಾಯಿತು.

ಹಲವಾರು ಸಂಸ್ಥೆಗಳ ಪ್ರತಿನಿಧಿಗಳು ಅಂದು ಭಾಗವಹಿಸಿದ್ದರು . ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್, ಕರ್ನಾಟಕ ಕಲ್ಚರಲ್ ಫೌಂಡೇಶನ್,ಕರ್ನಾಟಕ ಇಸ್ಲಾಮಿಕ್ ಸೆಂಟರ್, ಕರ್ನಾಟಕ NRI ಫೋರಮ್, ಕರ್ನಾಟಕ ಸಂಘ ಶಾರ್ಜಾಹ್, ಮಂಗಳೂರು ಕೊಂಕಣ್ಸ್, ಬಿಲ್ಲವ ಸಂಘ, ದುಬೈ ಬಿಲ್ಲವಾಸ್, ಅಲ ಕಮರ್ ಕಲ್ಚರಲ್ ಫೋರಮ್, ಕುಂದಾಪುರ ಅಸೋಸಿಯೇಷನ್, ಮೊದಲಾದ ಹಲವಾರು ಸಂಥೆಗಳ ಪ್ರತಿನಿಧಿಗಳು ಹಾಜರಿದ್ದರು.ಬಿಸಿಫ್ ಉಪಾಧ್ಯಕ್ಷರಾದ ಜನಾಬ್ ಅಮೀರುದ್ದೀನ್ ಮಡಿಕೇರಿ, BCF ಇಫ್ತಾರ್ ಕಮಿಟಿ ಯಾ ವೈಸ್ ಚಯರ್ಮನ್ ಹಾಗೂ ಉಪಾಧ್ಯಕ್ಷ ಜನಾಬ್ ಅಫೀಕ್ ಹುಸೈನ್, ವಾಲಂಟಿಯರ್ ಉಪಸಮಿತಿಯ ನಾಯಕರಾದ ಜನಾಬ್ ಯಾಕೂಬ್ DEWA , ಜನಾಬ್ ಸುಲೇಮಾನ್ ಮೂಳೂರು, ಜನಾಬ್ ಸಮದ್ ಬೀರಾಲೀ, ಪದಾಧಿಕಾರಿಗಳಾದ ಜ ನವಾಜ್ ಕೋಟೆಕಾರ್, ಜನಾಬ್ ಸಜಿಪ ಅಬ್ದುಲ್ ರಹ್ಮಾನ್, ಜನಾಬ್ ರಫೀಕ್ ಮುಲ್ಕಿ, ಜನಾಬ್ ಅಶ್ರಫ್ ಸಟ್ಟಿಕಲ್ ಹಾಗೂ BCF ಲೇಡೀಸ್ ವಿಂಗ್ ಇದರ ಚಯರ್ಮನ್ ಹಾಗೂ ಸದಸ್ಯರು ಎಲ್ಲರೂ ಈ ಕಾರ್ಯಕ್ರಮವು ಯಶಸ್ಸು ಗೊಳಿಸುವರೇ ಆಹೋ ರಾತ್ರಿ ಶ್ರಮಿಸಿದ್ದರು.

ಅಂತಿಮವಾಗಿ BCF ಉಪಾಧ್ಯಕ್ಷರಾದ ಜನಾಬ್ ಅಮೀರುದ್ದೀನ್ ಮಡಿಕೇರಿಯವರು ಧನ್ಯವಾದ ವಿತ್ತರು.

Comments are closed.