ರಾಷ್ಟ್ರೀಯ

ಕೇಂದ್ರದಿಂದ ತೈಲ ಬೆಲೆ ನಿಯಂತ್ರಣಕ್ಕೆ ನೂತನ ಕಾರ್ಯತಂತ್ರಕ್ಕೆ ಚಿಂತನೆ

Pinterest LinkedIn Tumblr


ಹೊಸದಿಲ್ಲಿ: ಅಂತಾರಾಷ್ಟ್ರೀಯ ತೈಲ ಬೆಲೆಗೆ ಅನುಗುಣವಾಗಿ ದೇಶದಲ್ಲೂ ಪೆಟ್ರೋಲ್‌ ಹಾಗೂ ಡೀಸಲ್‌ ಬೆಲೆ ನಿಗದಿ ಪಡಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.

ಪ್ರಸ್ತುತ ದೇಶದಲ್ಲಿ ಅಬಕಾರಿ ಸುಂಕ, ರಾಜ್ಯಗಳ ವ್ಯಾಟ್‌ ಕೇಂದ್ರ ಸರಕಾರ ನಿಗದಿ ಪಡಿಸುವ ದರಗಳ ಮೇಲೆ ಅವಲಂಬಿತವಾಗಿದೆ. ಅಂತಾರಾಷ್ಟ್ರೀಯ ದರ ಅನುಸರಿಸಿ ದೇಶದಲ್ಲಿ ತೈಲ ಬೆಲೆ ನಿಗದಿಪಡಿಸಲಾಗಿದೆ. ಮುಂದಿನ ದಿನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ತೈಲ ಬೆಲೆಯನ್ನೇ ನಿಗದಿಗೊಳಿಸಲು ಕೇಂದ್ರ ಸರಕಾರದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.

ಪ್ರಸ್ತುತ ಏರಿಕೆಯಾಗುತ್ತಿರುವ ಇಂಧನ ದರ ಇಳಿಸಲು, ಅಬಕಾರಿ ಸುಂಕ ಕಡಿಮೆಗೊಳಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಆದರೆ ಸುಂಕದ ಹಣವನ್ನು ವಿವಿಧ ಕಲ್ಯಾಣ ಯೋಜನೆಗಳಿಗೆ ಬಳಸುತ್ತಿರುವುದರಿಂದ ಸಮಸ್ಯೆಯಾಗುತ್ತದೆ ಎಂದು ಕೇಂದ್ರ ಇಂಧನ ಇಲಾಖೆ ಹೇಳಿದೆ

ಜಾಗತಿಕ ಮಟ್ಟದ ತೈಲ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಸುಸ್ಥಿರ ತೈಲ ದರದ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Comments are closed.