ಕರಾವಳಿ

ಕುದ್ರೋಳಿ ದೇವಸ್ಥಾನ ಸೇರಿದಂತೆ ಅಳಕೆ ಪರಿಸರ ಜಲಾವೃತ : ದೋಣಿ ಮೂಲಕ ಸ್ಥಳೀಯರು ಹಾಗೂ ಶಾಲಾ ಮಕ್ಕಳ ರಕ್ಷಣೆ

Pinterest LinkedIn Tumblr

ಮಂಗಳೂರು, ಮೇ 29: ಮಂಗಳೂರಿನಾದ್ಯಂತ ಇಂದು ಸುರಿದ ಭಾರೀ ಮಳೆಗೆ ಹಲವು ನಗರ ಪ್ರದೇಶಗಳು ಜಲಾವೃತಗೊಂಡಿದೆ. ಕುದ್ರೋಳಿ ದೇವಸ್ಥಾನ ಸೇರಿದಂತೆ ಕುದ್ರೋಳಿ – ಅಳಕೆ ಪರಿಸರದಲ್ಲಿ ನೀರು ತುಂಬಿದ್ದು, ಸ್ಥಳೀಯ ನಾಗರೀಕರು ಪರದಾಡು ವಂತಾಯಿತು.

ಇಂದು ಸುರಿದ ಭಾರೀ ಮಳೆಗೆ ಭಾರೀ ಮಳೆಗೆ ಮಂಗಳೂರು ತತ್ತರಿಸಿದ್ದು, ನಗರದ ಕುದ್ರೋಳಿ ಅಳಕೆಯ ರಸ್ತೆಯಲ್ಲಿ ನೀರು ತುಂಬಿದ ಪರಿಣಾಮ ಶಾಲಾ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಾಯದಿಂದ ದೋಣಿ ಮೂಲಕ ಸಾಗಿಸಲಾಯಿತು.

ಅಳಕೆಯ ಗುಜರಾತಿ ಶಾಲೆಯ ಮಕ್ಕಳು ಕೂಡಾ ಶಾಲೆಯಿಂದ ಹೊರಬರಲಾಗದೆ ಸಮಸೈ ಎದುರಿಸಿದ್ದು. ಈ ಮಧ್ಯೆ ಈ ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ರಕ್ಷಿಸಿ ದೋಣಿ ಮೂಲಕ ಕರೆತರಲಾಯಿತು. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಡಳಿತ ಹಾಗೂ ಮನಪಾದ ವೈಫಲ್ಯದಿಂದ ಇಂತಹ ಸಮಸೈ ಎದುರಿಸುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

Comments are closed.