ಕರಾವಳಿ

ಬೆಳಿಗ್ಗೆ ಖುಷಿಯಿಂದ ಶಾಲೆಗೆ ತೆರಳಿದ ಬಾಲೆ, ಬ್ಯಾಗ್ ಧರಿಸಿದ ಸ್ಥಿತಿಯಲ್ಲೇ ಶವಾಗಿದ್ದಳು

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಮಹಾಮಳೆ ಮುಗ್ಧ ಬಾಲೆಯನ್ನು ಬಲಿ ಪಡೆದು ಇಡೀ ಮನೆಯನ್ನು ಕಣ್ಣಿರಲ್ಲಿ ಕೈತೊಳೆಯುವಂತೆ ಮಾಡಿದೆ. ಆಕೆ ಸಂತಸದಿಂದ ಬೆಳಿಗ್ಗೆ ತಾಯಿಗೆ ಟಾಟಾ ಬೈ ಹೇಳಿ ಶಾಲೆಗೆ ತೆರಳಿದ್ದಳು. ಸಂಜೆ ಸಹೋದರಿಯೊಂದಿಗೆ ವಾಪಾಸ್ ಮನೆಗೆ ಬರುತ್ತಿರುವಾಗ ನೀರಿನ ರೂಪದಲ್ಲಿ ಬಂದ ಜವರಾಯ ಆಕೆ ಶಾಶ್ವತವಾಗಿ ಮನೆಗೆ ಬಾರದಂತೆ ಮಾಡಿದೆ.

ಶಾಲೆಗೆ ತೆರಳಿ ಅಕ್ಕನ ಜೊತೆ ಮಂಗಳವಾರ ಸಂಜೆ ವಾಪಾಸ್ ಬರುತ್ತಿರುವಾಗ ಕಿರು ಸೇತುವೆ ದಾಟುವ ವೇಳೆ ನೀರಿನಲ್ಲಿ ಕೊಚ್ಚಿಹೋಗಿದ್ದ ಬಾಲಕಿಯ ಮೃತದೇಹ ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ಬುಧವಾರ ಬೆಳಿಗ್ಗೆ ಸತತ ಹದಿನಾರು ಗಂಟೆ ಕಾರ್ಯಾಚರಣೆ ಬಳಿಕ ಪತ್ತೆಯಾಗಿದೆ.

ಪಡುಬಿದ್ರೆ ಪಾದೆಬೆಟ್ಟು ನಿವಾಸಿ ಉಮೇಶ್ ಆಚಾರ್ಯ ಹಾಗೂ ಆಶಾ ದಂಪತಿಗಳ ಪುತ್ರಿಯಾದ ಆಕೆ ಹೆಸರು ನಿಧಿ ಆಚಾರ್ಯ(9). ಪಡುಬಿದ್ರೆ ಶಾಲೆಯಲ್ಲಿ ನಾಲ್ಕನೆ ತರಗತಿ ಓದುತ್ತಿದ್ದಳು. ನಿನ್ನೆ ಸಂಜೆ ಅಕ್ಕ ನಿಶಾ ಜೊತೆ ಸೈಕಲಿನಲ್ಲಿ ಮನೆಗೆ ಮರಳುತ್ತಿದ್ದಾಗ ಪಟ್ಲ ಸಮೀಪ ಕಿರು ಸೇತುವೆ ಬಳಿ ಇಬ್ಬರು ನೀರಿಗೆ ಬಿದ್ದಿದ್ದಾರೆ. ಸಹೋದರಿ ಅದ್ಯೇಗೋ ಮೇಲೆದ್ದು ಬಂದಿದ್ದು ನಿಧಿ ಮಾತ್ರ ಕೊಚ್ಚಿ ಹೋಗಿದ್ದಳು. ನಿಧಿಯನ್ನು ಕಳೆದುಕೊಂಡ ಆ ಮನೆಯಲ್ಲಿ ದುಃಖ ಮಡುಗಟ್ಟಿದೆ. ತಂದೆ ತಾಯಿ ಹಾಗೂ ಸೋದರಿಯ ಆಕ್ರಂಧನ ಮುಗಿಲು ಮುಟ್ಟಿದೆ. ಯಾರ ಸಮಾಧಾನವನ್ನು ಕೇಳುವ ಸ್ಥಿತಿಯಲ್ಲಿ ಆ ನೊಂದ ಜೀವಗಳಿಲ್ಲ.4

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ನಿಧಿ ಕುಟುಂಬಕ್ಕೆ 4 ಲಕ್ಷ ರೂ ಪರಿಹಾರ ನೀಡಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಕೂಡ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

Comments are closed.