ಕರಾವಳಿ

ಕಿತ್ತಳೆ ಹಣ್ಣಿಗಿಂತ ನಾಲ್ಕು ಪಟ್ಟು ಹೆಚ್ಚಿರುವ ವಿಟಮಿನ್ ಇರುವ ಈ ಹಣ್ಣು ಆರೋಗ್ಯಕ್ಕೆ ಉತ್ತಮ

Pinterest LinkedIn Tumblr

ನಾವು ಕಾಲಕ್ಕೆ ತಕ್ಕಂತೆ ಬರುವ ಎಲ್ಲಾ ಬಗೆಯ ಹಣ್ಣುಗಳನ್ನ ಸಹ ತಿನ್ನಬೇಕು, ಆ ಕಾಲಗಳಿಗೆ ಸರಿಯಾಗಿ ನಮ್ಮ ಆರೋಗ್ಯವನ್ನ ಕಾಪಾಡಲು ಹಣ್ಣುಗಳು ಸಹಕಾರಿಯಾಗಿರತ್ತವೆ. ಸೀಬೆ ಹಣ್ಣು ಸಹ ನಮ್ಮ ಆರೋಗ್ಯಕ್ಕೆ ಉತ್ತಮ. ಮನುಷ್ಯನ ದೇಹಕ್ಕೆ ಬೇಕಾದ ಹಲವಾರು ಪೌಷ್ಟಿಕಾಂಶಗಳು ಸೀಬೆ ಹಣ್ಣಿನಲ್ಲಿ ಹೇರಳವಾಗಿದೆ. ಕಿತ್ತಳೆ ಹಣ್ಣಿಗಿಂತ ನಾಲ್ಕು ಪಟ್ಟು ಹೆಚ್ಚಿರುವ ವಿಟಮಿನ್ ಸಿ ವರ್ತಮಾನಗಳಿಗೆ ತಕ್ಕಂತೆ ದೇಹ ತೇವಾಂಶದಿಂದ ಕೂಡಿರಲು ಸಹಕರಿಸುತ್ತದೆ. ಸೀಬೆ ನಮ್ಮ ದೇಹದ ಆರೋಗ್ಯಕ್ಕೆ ಉತ್ತಮ ಮದ್ದಾಗಿದೆ.

* ಸೀಬೆ ಎಲೆಗಳು ದೇಹದಲ್ಲಿ ಕಂಡುಬರುವ ಉರಿಯೂತದ ನೋವು ನಿವಾರಕ ಶಮನ ಶಕ್ತಿಯನ್ನು ಒಳಗೊಂಡಿದೆ.
* ಸೀಬೆ ಮರದ ಚಿಗುರೆಲೆಗಳನ್ನು ಅಗಿದು ತಿನ್ನುವುದರಿಂದ ಶ್ವಾಸಕೋಶದ ಸಮಸ್ಯೆಯಿಂದ ದೂರವಿರಬಹುದು.
* ಸೀಬೆ ಹಣ್ಣಿನಲ್ಲಿರುವ ನಾರಿನಾಂಶವು ದೇಹದಲ್ಲಿರುವ ಬೊಜ್ಜನ್ನು ಕರಗಿಸಲು ಸಹಕರಿಸುವುದಲ್ಲದೆ, ದೇಹದ ತೂಕವನ್ನು ಇಳಿಸಿಕೊಳ್ಳಲು ಸಹಕರಿಸುತ್ತದೆ.
* ಸೀಬೆಹಣ್ಣಿನ ಸೇವನೆ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
* ಸೀಬೆ ಎಲೆಗಳನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿಟ್ಟು ತಲೆ ಸ್ನಾನ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.
* ಆಧುನಿಕ ಸಂಶೋಧನೆಯ ಪ್ರಕಾರ ಸೀಬೆ ಹಣ್ಣಿನ ಕಷಾಯ ಕುಡಿದರೆ ಕಾಮಾಲೆ ರೋಗ ನಿವಾರಣೆಯಾಗುತ್ತದೆ.
* ಸೀಬೆ ಹಣ್ಣು ಸೇವಿಸುವ ಜನರಲ್ಲಿ ಹೃದಯದ ರಕ್ತನಾಳಗಳು ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತವೆ. ಹೃದಯ ಮತ್ತು ನರಗಳನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ.
* ಸೀಬೆ ಹಣ್ಣಿನಲ್ಲಿ ಅದರಲ್ಲೂ ಕೆಂಪು ಸೀಬೆ ಹಣ್ಣಿನಲ್ಲಿ ಹೆಚ್ಚು ಪೌಷ್ಟಿಕಾಂಶಗಳ ಜೊತೆ ನಾರಿನಾಂಶವು ಇರುವುದರಿಂದ ಹೊಟ್ಟೆ ನೋವು ಕಡಿಮೆಯಾಗಿ ಮಲಬದ್ದತೆ ಸಮಸ್ಯೆ ನಿವಾರಣೆಯಾಗುತ್ತದೆ.
* ಗರ್ಭಿಣಿ ಸ್ತ್ರೀಯರು ಹೆಚ್ಚು ಸೇವಿಸುವುದರಿಂದ ಮಗುವಿನ ಎಲುಬಿನ ಬೆಳವಣಿಗೆಗೆ ಸಹಕಾರಿಯಾಗಲಿದೆ.
* ಸಕ್ಕರೆ ಕಾಯಿಲೆಗೆ ರಾಮ ಬಾಣ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಸೀಬೆ ಎಲೆಯ ಕಷಾಯವನ್ನು ಕುಡಿಯುವುದರಿಂದ ಡಯಾಬಿಟೀಸ್ ನ್ನು ದೂರವಿಡಬಹುದು.
* ವಸಡುಗಳಲ್ಲಾಗುವ ರಕ್ತಸ್ತ್ರಾವ ಮತ್ತು ಬಾಯಿಹುಣ್ಣು ಗುಣಪಡಿಸಲು ಸೀಬೆಹಣ್ಣಿನ ಎಲೆಗಳನ್ನು ಬಳಸಬಹುದು

Comments are closed.