ಕರ್ನಾಟಕ

ಮಗನ ಕೊಂದು, ಆತ್ಮಹತ್ಯೆಗೆ ಯತ್ನಿಸಿದ್ದ ಟಿ.ವಿ. ನಿರೂಪಕ ಚಂದನ್‌ ಪತ್ನಿ ಕೊನೆಗೂ ಸಾವು

Pinterest LinkedIn Tumblr

0
ದೊಡ್ಡಬಳ್ಳಾಪುರ: ಪತಿಯ ಅಕಾಲಿಕ ಮರಣ ದಿಂದ ಮನನೊಂದಿದ್ದ ಕಿರುತೆರೆ ನಿರೂಪಕ ಚಂದನ್‌ ಪತ್ನಿ ತನ್ನ ಮಗನನ್ನು ಹತ್ಯೆ ಮಾಡಿ,
ತಾನೂ ಆ್ಯಸಿಡ್‌ ಕುಡಿದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಗುರುವಾರ ನಡೆದಿದೆ. ನಗರದ ಸೋಮೇಶ್ವರ ಬಡಾವಣೆಯಲ್ಲಿನ
ತಮ್ಮ ಮನೆಯಲ್ಲಿ ವಾಸವಾಗಿದ್ದ ಮೀನಾ (35) ತನ್ನ ಮಗ ತುಷಾರ್‌(13)ನನ್ನು ಗುರುವಾರ 9.30ರ ಸುಮಾರಿನಲ್ಲಿ ಕತ್ತು ಕೊಯ್ದು ಹತ್ಯೆ ಮಾಡಿ, ತಾನೂ ಆ್ಯಸಿಡ್‌ ಸೇವಿಸಿ, ಸಾವು ಬದುಕಿನ ನಡುವೆ ಹೋರಾಡಿ ಕೊನೆಯುಸಿರೆಳೆದಿದ್ದಾರೆ.

ಎಂಟು ದಿನಗಳ ಹಿಂದೆಯಷ್ಟೇ ದಾವಣಗೆರೆ ಸಮೀಪ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕಿರುತೆರೆ ನಟ ಹಾಗೂ ನಿರೂಪಕ ಚಂದನ್‌ (ಚಂದ್ರಶೇಖರ್‌) ಅಗಲಿಕೆಯಿಂದ ತೀವ್ರವಾಗಿ ಅಘಾತಕ್ಕೆ ಒಳಗಾಗಿದ್ದ ಪತ್ನಿ ಮೀನಾ ಜತೆಗೆ ಅವರ ತಂದೆ ಮತ್ತು ಸಹೋದರ ಚೇತನ್‌ ಸೋಮೇಶ್ವರ ಬಡಾವಣೆಯ ಮನೆಯ ಲ್ಲಿಯೇ ವಾಸವಿದ್ದರು. ಗುರುವಾರ ಬೆಳಗ್ಗೆ ತುಷಾರ್‌ನನ್ನು ಶಾಲೆಗೆ ಸಿದ್ಧಗೊಳಿಸಲು ಹೇಳಿ ಸಹೋದರ ಚೇತನ್‌ ಹೋಟೆಲ್‌ನಿಂದ ತಿಂಡಿ ತರಲು ಹೋಗಿದ್ದರು. ಹೋಗಿ ಬರುವಷ್ಟರಲ್ಲಿ ಮೀನಾ, ಮಗ ತುಷಾರ್‌ನ ಕತ್ತು ಕೊಯ್ದು ಹತ್ಯೆ ಮಾಡಿ, ತಾನೂ ಆ್ಯಸಿಡ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ನರಳುತ್ತಿದ್ದರು. ಈ ವೇಳೆ ಎಂದಿನಂತೆ ತುಷಾರನನ್ನು ಶಾಲೆಗೆ ಕರೆದು ಕೊಂಡು ಹೋಗಲು ಮನೆ ಬಳಿ ಶಾಲಾ ವಾಹನ ಬಂದಿದೆ. ಬಾಗಿಲು ಹಾಕಿರುವುದು ಗಮನಿಸಿದ ಸಿಬ್ಬಂದಿ ಬಾಗಿಲು ತಳ್ಳಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಆ್ಯಸಿಡ್‌ ಕುಡಿದು ಅಸ್ವಸ್ಥಗೊಂಡಿರುವ ಮೀನಾ ಅವರನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು-ಬದುಕಿನ ಹೋರಾಡಿದ ಮೀನಾ ಕೊನೆಯುಸಿರೆಳೆದರು.

ಸಂಬಂಧಿಕರ ಆಕ್ರೋಶ: ಚಂದನ್‌ ಅಗಲಿಕೆ ಸಹಿಸಿಕೊಳ್ಳಲು ಸಾಧ್ಯವಾಗದ ಮೀನಾ ಆತ್ಮಹತ್ಯೆ ಮಾಡಿಕೊಂಡಿರುವುದು ಒಂದೆಡೆಯಾದರೆ, ತನ್ನ
ಮಗನನ್ನೇ ಬರ್ಬರವಾಗಿ ಕತ್ತು ಸೀಳಿ ಕೊಲೆ ಮಾಡಿರುವ ಕೃತ್ಯಕ್ಕೆ ಕುಟುಂಬ ಸದಸ್ಯರು, ಸಂಬಂಧಿಕರು, ಮಿತ್ರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಂದನ್‌ ಸಾವು ಆಕಸ್ಮಿಕ, ಆಕೆ ಬದುಕನ್ನು ಕಟ್ಟಿಕೊಳ್ಳಲು ಅವಕಾಶಗಳಿತ್ತು. ಆದರೆ, ಆಕೆಯ ಈ ಕೃತ್ಯ ಸರಿಯಲ್ಲ ಎನ್ನುವುದು ಎಲ್ಲರ
ಅಭಿಪ್ರಾಯವಾಗಿದೆ.

ಅಂತ್ಯ ಸಂಸ್ಕಾರ: ಮರಣೋತ್ತರ ಪರೀಕ್ಷೆಯ ನಂತರ ತುಷಾರ್‌ ಅಂತ್ಯ ಸಂಸ್ಕಾರ ಗುರುವಾರ ಸಂಜೆ ನಗರದ ಇಸ್ಲಾಂಪುರದಲ್ಲಿನ ನಗರ್ತರ ರುದ್ರಭೂಮಿಯಲ್ಲಿ ನಡೆಯಿತು. ಎಂಟು ದಿನಗಳ ಹಿಂದೆಯಷ್ಟೇ ಸಮಾಧಿ ಮಾಡಲಾಗಿದ್ದ ಚಂದನ್‌ ಸಮಾಧಿ ಪಕ್ಕದಲ್ಲೇ ಮಗ ತುಷಾರ್‌ನ ಸಮಾಧಿಯನ್ನು ಮಾಡಲಾಯಿತು. ಶವಸಂಸ್ಕಾರದಲ್ಲಿ ಭಾಗವಹಿಸಿದ್ದ ಸಂಬಂಧಿಗಳ ಹಾಗೂ ತುಷಾರ್‌ನ ತಾತ (ಮೀನಾ ತಂದೆ) ರಾಜಶೇಖರ್‌
ಆಕ್ರಂದನ ಮುಗಿಲು ಮುಟ್ಟಿತ್ತು.

ಪ್ರತಿಭಾನ್ವಿತ ತುಷಾರ್‌ ತುಷಾರ್‌
ತುಷಾರ್‌ ಸಾವಿನಿಂದ ಇಡೀ ಕುಟುಂಬ ತೀವ್ರ ಶೋಕ ದಲ್ಲಿ ಮುಳುಗಿದೆ. ತಂದೆ ಚಂದನ್‌ ತನ್ನ ನಿರೂಪಣೆಯಿಂದ ಜನಪ್ರಿಯರಾಗಿದ್ದರು. ಮಗ
ತುಷಾರ್‌ ಸಹ ಕರಾಟೆ ಹಾಗೂ ಓದಿನಲ್ಲಿಯೂ ಮುಂದಿದ್ದ. ನಗರದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ತುಷಾರ್‌ ಎಲ್ಲರಿಗೂ ಪ್ರೀತಿಪಾತ್ರ ನಾಗಿದ್ದ. ತಂದೆಯ ಅಗಲಿಕೆಯ ನೋವು ಬರದಂತೆ ಆತನನ್ನು ಸಮಾಧಾನ ಪಡಿಸುತ್ತಾ, ತನ್ನ ಮಗುವಂತೆ ನೋಡಿಕೊಳ್ಳುತ್ತಿದ್ದ ಚಂದನ್‌ ಅಣ್ಣ ಶಿವಕುಮಾರ್‌ ಹಾಗೂ ಕುಟುಂಬದವರಿಗೆ ತುಷಾರ್‌ ಸಾವು ತೀವ್ರ ಆಘಾತ ನೀಡಿದೆ. ಸಹೋ ದರನ ಅಗಲಿಕೆಯಾಗಿ ಇನ್ನೂ
ವಾರವಾಗಿದೆ. ಆಗಲೇ ಈ ದುರಂತ ಸಂಭವಿಸಿರುವುದು ತಮಗೆ ಸಿಡಿಲು ಬಡಿದಂತಾಗಿದೆ ಎಂದು ನೋವಿನಿಂದ ನುಡಿಯುತ್ತಾರೆ ಶಿವಕುಮಾರ್‌.

Comments are closed.