ಮುಂಬೈ

ನೆರೆಹೊರೆಯವರಿಂದ ಸ್ಥಳೀಯ ಮಾಹಿತಿ ಕಲೆ ಹಾಕಲು ನೆರವಾಗುವ ‘ಗೂಗಲ್ ನೇಬರ್ಲೀ ಆ್ಯಪ್’

Pinterest LinkedIn Tumblr


ಮುಂಬಯಿ: ವಾಣಿಜ್ಯ ನಗರಿ ಮುಂಬಯಿಯಲ್ಲಿ ನಡೆದ ಸಮಾರಂಭದಲ್ಲಿ ಸರ್ಚ್ ಎಂಜಿನ್ ದೈತ್ಯ ಗೂಗಲ್, ಅತಿ ನೂತನ ಗೂಗಲ್ ನೇಬರ್ಲೀ (Google Neighbourly App) ಅಪ್ಲಿಕೇಷನ್ ಬಿಡುಗಡೆ ಮಾಡಿದೆ.

ಜನರಿಗೆ ತಮ್ಮ ನೆರೆಹೊರೆಯವರಿಂದ ಸ್ಥಳೀಯ ಮಾಹಿತಿಗಳನ್ನು ಕಲೆ ಹಾಕಲು ನೆರವಾಗುವ ಆ್ಯಪ್ ಇದಾಗಿದೆ.

ಭಾರತದ ಮೇಲೆ ಅತಿ ಹೆಚ್ಚು ಗಮನ ಕೇಂದ್ರಿಕರಿಸಿರುವ ಟೆಕ್ ದೈತ್ಯ ಗೂಗಲ್, ಇದೀಗ ಆಂಡ್ರಾಯ್ಡ್ ಬಳಕೆದಾರರಿಗೆ ಸ್ಥಳೀಯ ಮಾಹಿತಿ ಹಂಚಿಕೆ ಆ್ಯಪ್ ಅಭಿವೃದ್ಧಿಗೊಳಿಸಿದೆ. ಹೊಸತಾದ ಗೂಗಲ್ ನೇಬರ್ಲೀ ಆ್ಯಪ್ ಮೂಲಕ ಅದೇ ಪ್ರದೇಶದ ಜನರಿಗೆ ಸ್ಥಳೀಯ ಪ್ರಶ್ನೆಗಳನ್ನು ಕೇಳಲು ಹಾಗೂ ಸಂಬಂಧಿತ ಉತ್ತರಗಳನ್ನು ಹುಡುಕಲು ಸುಲಭವಾಗಲಿದೆ.

ನಗರಗಳು ಮತ್ತು ಅಲ್ಲಿ ವಾಸಿಸುವ ಜನರು ಬದಲಾಗುತ್ತಿರುವಂತೆಯೇ ಸ್ಥಳೀಯ ಸಂದೇಹಗಳಿಗೆ ಸೂಕ್ತ ಉತ್ತರ ಹುಡುಕುವುದು ಕಷ್ಟವಾಗುತ್ತಿದೆ ಎಂಬುದನ್ನು ಗೂಗಲ್ ಮನಗಂಡಿದೆ.

ಆ್ಯಪ್ ಕಾರ್ಯ ನಿರ್ವಹಣೆ ಹೇಗೆ?
ಬಳಕೆದಾರರು ಪ್ರಶ್ನೆಯನ್ನು ಕೇಳಿದಾಗ ಉತ್ತರ ಮಾಡುವಂತಹ ಪರಿಣಿತರಿಗೆ ಕಳುಹಿಸಲಾಗುತ್ತದೆ. ಗೂಗಲ್ ವಾಯ್ಸ್ ಗುರುತಿಸುವಿಕೆ ಮೂಲಕ ನಿಮ್ಮ ಪ್ರಶ್ನೆ ಕೇಳಬಹುದು ಅಥವಾ ಉತ್ತರವನ್ನು ನೀಡಬಹುದು. ಆಂಗ್ಲ ಹಾಗೂ ಭಾರತದ ಎಂಟು ಪ್ರಾದೇಶಿಕ ಭಾಷೆಗಳಲ್ಲಿ ಇದು ಬೆಂಬಲಿಸುತ್ತದೆ ಎಂಬುದು ಗಮನಾರ್ಹ.

ಸ್ಥಳೀಯ ಪ್ರಶ್ನೆಗಳ ಬಗ್ಗೆ ಮಾಹಿತಿಯಿದ್ದರೆ ಉತ್ತರಿಸಬಹುದಾಗಿದೆ. ಕುತೂಹಲಕಾರಿಯೆಂಬಂತೆ ಸಹಾಯಕವಾದ ಮಾಹಿತಿ ನೀಡುವವರಿಗೆ ಬ್ಯಾಡ್ಜ್, ಕಮ್ಯೂನಿಟಿ ಈವೆಂಟ್‌ಗಳ ಪ್ರತಿಫಲವನ್ನು ನೀಡಲಾಗುತ್ತದೆ.

ಗೂಗಲ್ ನೇಬರ್ಲೀ ಆ್ಯಪ್‌ನಲ್ಲಿ ಗರಿಷ್ಠ ಸುರಕ್ಷತೆಯನ್ನು ಕಾಯ್ದುಕೊಳ್ಳಲಾಗಿದ್ದು, ಖಾಸಗಿ ಮಾಹಿತಿಯನ್ನು ನೀಡದೆಯೇ ನೀವು ಪ್ರಶ್ನೆ ಕೇಳುವುದು, ಬ್ರೌಸ್ ಮಾಡುವುದು ಹಾಗೂ ಉತ್ತರವನ್ನು ನೀಡಬಹುದು. ಇಲ್ಲಿ ಫೋನ್ ನಂಬರ್, ಹೆಸರು ಹಾಗೂ ಇತರೆ ಸಂಪರ್ಕ ಮಾಹಿತಿಯನ್ನು ಗೌಪ್ಯವಾಗಿ ಇಡಬಹುದಾಗಿದೆ.

ಸದ್ಯ ನೇಬರ್ಲೀ ಆ್ಯಪ್ ಬೇಟಾ ವರ್ಷನ್ ಮುಂಬಯಿಗೆ ಮಾತ್ರ ಸೀಮಿತವಾಗಿದೆ.

Comments are closed.