ಆರೋಗ್ಯ

ಊಟವಾದ ಬಳಿಕ ಮಜ್ಜಿಗೆ ಕುಡಿಯುವುದರ ಪ್ರಯೋಜನ ಬಲ್ಲಿರಾ…?

Pinterest LinkedIn Tumblr

ಮಜ್ಜಿಗೆ ಭೂಲೋಕದ ಅಮೃತ ಮಜ್ಜಿಗೆಯು ಜೀರ್ಣಕ್ಕೆ ಹಗುರವಾದಂತಹುದು. ಸಿಹಿ, ಕಷಾಯ ರಸ ಹಾಗು ಹುಳಿ ರಸಗಳು ಪ್ರಧಾನವಾಗಿರುತ್ತವೆ. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಕಫ ಹಾಗೂ ವಾತದೋಷಗಳನ್ನು ಶಮನ ಮಾಡುತ್ತದೆ. ಹಳ್ಳಿಯ ಕಡೆಗೆ ನೀವು ಹೋದರೆ, ರೈತರು ಗದ್ದೆಯಲ್ಲಿ ಕೆಲಸ ಮಾಡುವಾಗ ನಡುವೆ ವಿರಾಮದ ಸಮಯದಲ್ಲಿ ಬೆಲ್ಲ ಮತ್ತು ಮಜ್ಜಿಗೆ ಕುಡಿಯುತ್ತಾರೆ ನಿಮಗೆ ಗೊತ್ತಿರ ಬಹುದು, ಹಿಂದೆ ವ್ಯಾಯಾಮ ಶಾಲೆಯಲ್ಲೂ, ಕುಸ್ತಿ ಅಖಾಡದ ಕೇಂದ್ರದಲ್ಲೂ, ಪೊಲೀಸ್ ತರಬೇತಿ ಕೇಂದ್ರದಲ್ಲೂ, ಸೈನಿಕರ ತರಬೇತಿ ಸಮಯದಲ್ಲೂ ವಿರಾಮದ ವೇಳೆಗೆ ಮಜ್ಜಿಗೆಯನ್ನು ನೀಡುತಿದ್ದರು, ಅದು ಅವರಿಗೆ ಮತ್ತಷ್ಟು ಹುರುಪು ಶಕ್ತಿ ನೀಡುತ್ತಿತ್ತು. ಈಗಿನ ಎನರ್ಜಿ ಡ್ರಿಂಕ್, ಪ್ರೊಟೀನ್ ಶೇಕ್ ಇಲ್ಲದಿದ್ದ ಆ ಸಮಯದಲ್ಲಿ ಮಜ್ಜಿಗೆಯೇ ಎಲ್ಲರ ಎನರ್ಜಿ ಡ್ರಿಂಕ್ ಆಗಿತ್ತು. ಕಪಟ ಕೆಮಿಕಲ್ ಗಳಿಂದ ಕೂಡಿರುವ ಆರೋಗ್ಯಕ್ಕೆ ಹಾನಿಕಾರವಾಗಿರುವ ಎನರ್ಜಿ ಡ್ರಿಂಕ್ ಬದಲಿಗೆ ಸುಲಭವಾಗಿ ತಯಾರಾಗುವ ಬಡವರ ಅಮೃತ ಎಂದೇ ಪ್ರಸಿದ್ಧಿಯಾಗಿರುವ ಮಜ್ಜಿಗೆಯಲ್ಲಿರುವ ಆರೋಗ್ಯಕರ ಗುಣಗಳು ಇಲ್ಲಿವೆ ನೋಡಿ.

* ಪೈಲ್ಸ್ ಅಥವಾ ಮೂಲವ್ಯಾದಿ ಕಾಯಿಲೆ ಇರುವವರು ಪ್ರತಿದಿನ ಮಜ್ಜಿಗೆಯನ್ನು ಕುಡಿಯುವುದರಿಂದ ತುಂಬಾ ಒಅಳ್ಳೆಯದು, ಇದು ಹೊಟ್ಟೆಯನ್ನು ತಂಪಾಗಿ ಇಡುತ್ತದೆ, ಹಾಗೂ ಮಲಬದ್ಧತೆ ಸಮಸ್ಯೆ ಉಂಟು ಮಾಡುವುದಿಲ್ಲ.
* ನಿಮಗೆ ಹೊಟ್ಟೆ ನೋವು ಕಂಡು ಬಂದರೆ, ಅಜೀರ್ಣದ ತೊಂದರೆ ಇದ್ದಾರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು, ಬೆರೆಸಿ ಕುಡಿದರೆ ಕೂಡಲೇ ಕಮ್ಮಿಯಾಗುತ್ತದೆ.
* ಅಸಿಡಿಟಿ, ಎದೆಯುರಿ ಇರುವವರು ಮಜ್ಜಿಗೆ ಕುಡಿದರೆ ಅದು ಕೂಡಲೇ ಹತೋಟಿಗೆ ಬಂದು ರಿಲೀಫ್ ಸಿಗುತ್ತದೆ.
* ಒಂದು ಚಮಚ ಸಕ್ಕರೆ, ರುಚಿಗೆ ಸ್ವಲ್ಪ ಉಪ್ಪು, ಸೇರಿಸಿ ಒಂದು ಗ್ಲಾಸ್ ಮಜ್ಜಿಗೆ ಸೇವನೆ ಮಾಡಿದರೆ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ
* ಶುಗರ್ ಇರುವವರು ಅಂದರೆ ಸಕ್ಕರೆ ಕಾಯಿಲೆ ಇರುವವರು ಮಜ್ಜಿಗೆ ಕುಡಿಯುತ್ತಿದ್ದರೆ ದೇಹದ ಸ್ಥಿತಿ ನಿಯಂತ್ರಣದಲ್ಲಿರುತ್ತದೆ.
* ಬೇಧಿ, ರಕ್ತಬೇಧಿ ಹಾಗೂ ಕರುಳಿನ ವಿಕಾರಗಳಲ್ಲಿ, ಕರುಲಿನಲ್ಲಾಗುವ ವಿಪರೀತ ಒತ್ತಡವನ್ನು ಕಡಿಮೆಯಾಗಿಸಲು ಮಜ್ಜಿಗೆ ರಾಮಬಾಣ
* ಈಗ ಲಿವರ್ ನಲ್ಲಿ ಹಲವು ತೊಂದರೆ ಕಾಣಿಸಿಕೊಳ್ಳುವುದು ಸಾಮಾನ್ಯ, ಲಿವರ್ ನಲ್ಲಿನ ವಿಷಕಾರಿ ಗುಣಗಳನ್ನು ತೆಗೆದುಹಾಕುವ ಶಕ್ತಿ ಮಜ್ಜಿಗೆಗೆ ಇದೆ.
* ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಮಜ್ಜಿಗೆ ಕುಡಿಯುತ್ತಿದ್ದರೆ ರಕ್ತನಾಳಗಳಲ್ಲಿ ಲೇಪಿತವಾಗಿರುವ ಕೊಬ್ಬಿನಂಶ ತೆಗೆದುಹಾಕುತ್ತದೆ

Comments are closed.