ರಾಷ್ಟ್ರೀಯ

ಆಯೋಗದ ಮೊಬೈಲ್‌ ಆ್ಯಪ್‌ ನಿಂದ ಚುನಾವಣಾ ಅಕ್ರಮ ತಿಳಿಸುವವರ ಗುರುತು ಸೂಕ್ತ ರಕ್ಷಣೆ, ಗೌಪ್ಯ: ಸಿಇಸಿ ಒ ಪಿ ರಾವತ್‌ ಭರವಸೆ

Pinterest LinkedIn Tumblr


ಕೋಲ್ಕತ : ಚುನಾವಣಾ ಆಯೋಗದ ಮೊಬೈಲ್‌ ಆ್ಯಪ್‌ ಮೂಲಕ ಚುನಾವಣಾ ಅಕ್ರಮಗಳ ಮಾಹಿತಿಯನ್ನು ಬಹಿರಂಗಪಡಿಸುವವರ ಗುರುತನ್ನು ಸೂಕ್ತ ರಕ್ಷಣೆಯೊಂದಿಗೆ ಗೌಪ್ಯವಾಗಿ ಇಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಒ ಪಿ ರಾವತ್‌ ಭರವಸೆ ನೀಡಿದ್ದಾರೆ.

ಈಚೆಗೆ ನಡೆದ ಕರ್ನಾಟಕ ವಿಧಾನ ಸಭಾ ಚುನಾವಣೆಯ ವೇಳೆ ಪ್ರಾಯೋಗಿಕವಾಗಿ ಪರಿಚಯಿಸಲಾಗಿದ್ದ ಚುನಾವಣಾ ಆಯೋಗದ ಆ್ಯಪ್‌ ಮೂಲಕ ಸುಮಾರು 680 ವಿಡಿಯೋ ದೂರುಗಳು ದಾಖಲಾಗಿದ್ದವು.

ಈ ಬಗೆಯ ಚುನಾವಣಾ ಅಕ್ರಮ ವಿಡಿಯೋ ದೂರುಗಳನ್ನು ನೀಡುವವರ ಗುರುತು ಬಹಿರಂಗವಾಗದಂತೆ ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ರಾವತ್‌ ಹೇಳಿದರು.

ಇಲ್ಲಿನ ಎಂಸಿಸಿಐ ನಲ್ಲಿ ಏರ್ಪಡಿಸಲಾಗಿದ್ದ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಾವತ್‌, ಚುನಾವಣಾ ಆಯೋಗದ ಈ ಮೊಬೈಲ್‌ ಆ್ಯಪ್‌ನಿಂದ ಸಾಮಾನ್ಯ ಜನರಿಗೆ ಚುನಾವಣಾ ಅಕ್ರಮಗಳ ವಿರುದ್ಧ ಸೆಟೆದು ನಿಲ್ಲುವ ಶಕ್ತಿ ಬಂದಿದೆ ಎಂದು ಹೇಳಿದರು.

Comments are closed.