ಮನೋರಂಜನೆ

ರಜನಿಕಾಂತ್ ‘ಕಾಳಾ’ಗೆ ಎದುರಾದ ಮತ್ತೊಂದು ಸಂಕಟ ! ಕ್ಷಮೆ ಕೇಳಿ, ಇಲ್ಲ 101 ಕೋಟಿ ರೂ ಮಾನನಷ್ಟ ಮೊಕದ್ದಮೆ ಎಚ್ಚರಿಕೆ !

Pinterest LinkedIn Tumblr

ಮುಂಬೈ: ಸೂಪರ್ ಸ್ಚಾರ್ ರಜನಿಕಾಂತ್ ಅಭಿನಯದ ‘ಕಾಳಾ’ ಚಿತ್ರದ ಬಿಡುಗಡೆಗೆ ಮುನ್ನವೇ ಸೂಪರ್‌ ಸ್ಟಾರ್‌ ರಜನಿಕಾಂತ್‌ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಚಿತ್ರಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಚಾರ್ ರಜನಿಕಾಂತ್ ತಮ್ಮ ಕ್ಷಮೆ ಕೇಳಬೇಕು.. ಇಲ್ಲವಾದಲ್ಲಿ 101 ಕೋಟಿ ರೂಗಳ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಮುಂಬೈ ಮೂಲದ ಪತ್ರಕರ್ತರೊಬ್ಬರು ಎಚ್ಚರಿಕೆ ನೀಡಿದ್ದಾರೆ.

ರಜನಿಕಾಂತ್ ಅಭಿನಯದ ಕಾಳಾ ಚಿತ್ರಕ್ಕೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸೂಪರ್ ಸ್ಚಾರ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮುಂಬೈ ಮೂಲದ ಪತ್ರಕರ್ತರೊಬ್ಬರು ರಜನಿಕಾಂತ್ ವಿರುದ್ಧ 101 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಇಲ್ಲ ಎಂದು ಸ್ವತಃ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅವರು ಹೇಳಿದ್ದಾರೆ.

ಇದರ ಬೆನ್ನಲ್ಲೇ ರಜನಿಕಾಂತ್ ಗೆ ಮುಂಬೈ ಮೂಲದ ಪತ್ರಕರ್ತರೊಬ್ಬರು ಮತ್ತೊಂದು ಸಂಕಷ್ಟ ಒಡ್ಡಿದ್ದಾರೆ. ಇದೇ ಜೂನ್ 7ರಂದು ರಜನಿಕಾಂತ್‌ ಅಭಿಯನದ ಬಹುನಿರೀಕ್ಷಿತ ‘ಕಾಳಾ’ ಚಿತ್ರ ತೆರೆಗೆ ಬರಲು ಸಿದ್ಧತೆ ನಡೆಸಿದೆ. ಇದಕ್ಕೂ ಮನ್ನವೇ ಮುಂಬೈ ಮೂಲದ ಪತ್ರಕರ್ತ ಜವಹಾರ್‌ ನಡಾರ್‌ ಎಂಬುವವರು ‘ಕಾಳಾ’ ಚಿತ್ರದ ಬಗ್ಗೆ ತಗಾದೆ ಎತ್ತಿದ್ದಾರೆ. ‘ಕಾಳಾ’ ಚಿತ್ರ ತಮ್ಮ ತಂದೆ ದಿ. ಎಸ್‌‌.ತಿರವಯಾಮ್‌ ನಾಡಾರ್‌ ಅವರ ಜೀವನದ ಕುರಿತಾಗಿದ್ದು, ರಜನಿ ನಮ್ಮ ತಂದೆಯ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ತಂದೆ ತಿರವಯಾಮ್‌ ಅವರನ್ನು ನೆಗಟಿವ್‌ ಆಗಿ ಬಿಂಬಿಸಲಾಗಿದೆ. ಶ್ರೀಮಂತರು ಮತ್ತು ಮೇಲ್ಜಾತಿಯರನ್ನು ಸೆಳೆಯುವ ಪ್ರಯತ್ನವನ್ನು ಚಿತ್ರದಲ್ಲಿ ಮಾಡಲಾಗಿದೆ ಎಂದು ಜವಹಾರ್‌ ನಡಾರ್‌ ಆರೋಪಿಸಿದ್ದಾರೆ.

ಅಂತೆಯೇ 36 ಗಂಟೆಗಳಲ್ಲಿ ಖುದ್ದು ರಜನಿಕಾಂತ್‌ ಕ್ಷಮೆ ಕೇಳಬೇಕೆಂದು ವಕೀಲರ ಮೂಲಕ ಜವಹಾರ್‌ ನಡಾರ್‌ ಲೀಗಲ್‌ ನೋಟಿಸ್‌ ರವಾನಿಸಿದ್ದಾರೆ. ಒಂದು ವೇಳೆ ರಜನಿ ಕ್ಷಮೆ ಕೇಳದೆ ಇದ್ದ ಪಕ್ಷದಲ್ಲಿ 101 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಎಚ್ಚರಿಸಿದ್ದಾರೆ.

ತಮಿಳುನಾಡಿನ ತೂತುಕುಡಿ ಮೂಲದ ಜವಹಾರ್‌ ತಂದೆ ತಿರವಯಾಮ್‌ ನಡಾರ್‌ 1957ರಲ್ಲಿ ಮುಂಬೈಗೆ ಬಂದು ನೆಲೆಸಿದ್ದರಂತೆ. ಬೆಲ್ಲ ಮತ್ತು ಕಬ್ಬಿನ ವ್ಯಾಪಾರಿ ಆಗಿದ್ದ ಅವರನ್ನು ‘ಗೂಡ್‌ವಾಲಾ ಸೇಠ್‌’ ಮತ್ತು ‘ಕಾಳಾ ಸೇಠ್‌’ ಎಂದು ಕರೆಯುತ್ತಿದ್ದರಂತೆ. ಇತ್ತ, ಈ ಬಗ್ಗೆ ಮಾಧ್ಯಮಗಳು ‘ಕಾಳಾ’ ಚಿತ್ರ ತಂಡವನ್ನು ಸಂಪರ್ಕಿಸಿದ್ದು, ನೋಟಿಸ್‌ ತಮ್ಮ ಕೈ ಸೇರಿದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಚಿತ್ರ ತಂಡ ಹೇಳಿದೆ.

Comments are closed.