ರಾಷ್ಟ್ರೀಯ

ಇಫ್ತಾರ್ ಕೂಟ ರದ್ದುಪಡಿಸಿದ ರಾಷ್ಟ್ರಪತಿ ಭವನ ! ಹಣವನ್ನು ಅನಾಥಾಶ್ರಮಗಳಿಗೆ ನೀಡಲು ತೀರ್ಮಾನ

Pinterest LinkedIn Tumblr

ನವದೆಹಲಿ: ರಂಜಾನ್ ಪ್ರಯುಕ್ತ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಲಾಗುತ್ತಿದ್ದ ಇಫ್ತಿಯಾರ್ ಕೂಟವನ್ನು ರದ್ದು ಪಡಿಸಲಾಗಿದೆ.

ರಂಜಾನ್ ಅಂಗವಾಗಿ ಇದೇ ಜೂನ್ 16ರಂದು ರೋಜಾ ನಡೆಯಲಿದೆ. ಸಾಮಾನ್ಯವಾಗಿ ರಾಷ್ಟ್ರಪತಿ ಭವನದಲ್ಲಿ ಈವರೆಗೂ ಹಬ್ಬದ ಹಿಂದಿನ ದಿನ ರಾಷ್ಟ್ರೀಯ ಪಕ್ಷಗಳ ನಾಯಕರು, ಮುಸ್ಲಿಂ-ಧಾರ್ಮಿಕ ಸಂಘಟನೆಗಳ ಮುಖಂಡರನ್ನು ಕರೆಸಿ ಇಫ್ತಿಯಾರ್ ಕೂಟವನ್ನು ಆಯೋಜಿಸಲಾಗುತ್ತಿತ್ತು.

ಆದರೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ಇಫ್ತಿಯಾರ್ ಕೂಟವನ್ನು ನಡೆಸದಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಕೂಡ ರಾಷ್ಟ್ರಪತಿ ಭವನದಲ್ಲಿ ಇಫ್ತಿಯಾರ್ ಕೂಟವನ್ನು ರದ್ದುಪಡಿಸಿ ಇದಕ್ಕೆ ತಗುಲುವ ವೆಚ್ಚದ ಹಣವನ್ನು ಅನಾಥಾಶ್ರಮಗಳಿಗೆ ನೀಡಿ ಮಾನವೀಯತೆ ಮೆರೆದಿದ್ದರು.

ಅಬ್ದುಲ್ ಕಲಾಂ ಮಾದರಿಯನ್ನೇ ರಾಮನಾಥ್ ಕೋವಿಂದ್ ಅವರು ಅನುಸರಿಸುತ್ತಿದ್ದು ಅದರ ಹಣವನ್ನು ಅನಾಥಾಶ್ರಮಗಳಿಗೆ ನೀಡಲು ತೀರ್ಮಾನಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಮೂಲಗಳು ಖಚಿತಪಡಿಸಿವೆ. ಅಬ್ದುಲ್ ಕಲಾಂ ಅವರು ಐದು ವರ್ಷ ರಾಷ್ಟ್ರಪತಿ ಆಗಿದ್ದ ಸಂದರ್ಭದಲ್ಲಿ ಐದು ವರ್ಷವೂ ಇಫ್ತಿಯಾರ್ ಕೂಟವನ್ನು ನಡೆಸಿರಲಿಲ್ಲ. ಆದರೆ ಬಳಿಕ ಪ್ರತಿಭಾ ಪಾಟೀಲ್ ಹಾಗೂ ಪ್ರಣಬ್ ಮುಖರ್ಜಿ ಇಫ್ತಿಯಾರ್ ಕೂಟವನ್ನು ಆಯೋಜಿಸಿದ್ದರು.

Comments are closed.