ಅಹ್ಮದಾಬಾದ್ : ಇಶ್ರತ್ ಜಹಾನ್ ನಕಲಿ ಶೂಟೌಟ್ ಕೇಸಿಗೆ ಸಂಬಂಧಿಸಿ ಸಿಬಿಐ ಗುಜರಾತಿನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಹಾಯಕ ಸಚಿವ ಅಮಿತ್ ಶಾ ಅವರನ್ನು ಬಂಧಿಸಲು ಬಯಸಿತ್ತು ಎಂದು ಗುಜರಾತಿನ ಮಾಜಿ ಡಿಐಜಿ ಡಿಜಿ ವಂಜಾರಾ ಅವರು ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನ್ಯಾಯಾಧೀಶ ಜೆ ಕೆ ಪಾಂಡ್ಯ ಅವರ ನ್ಯಾಯಾಲಯದಲ್ಲಿ ಡಿಸ್‌ಚಾರ್ಜ್ ಪಿಟಿಶನ್ ಸಲ್ಲಿಸಿರುವ ವಂಜಾರಾ ಪರವಾಗಿ ವಾದಿಸಿದ ಅವರ ವಕೀಲ ವಿ ಡಿ ಗಜ್ಜರ್ ಅವರು “ಸಿಬಿಐ ಅಂದು ಮೋದಿ ಮತ್ತು ಅಮಿತ್ ಶಾ ಅವರನ್ನು ಬಂಧಿಸುವುದಿತ್ತು; ಆದರೆ ಅದೃಷ್ಟವಶಾತ್ ಅದು ಆಗಲಿಲ್ಲ’ ಎಂದು ಹೇಳಿದರು.
ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಕೇಸಿನ ತನಿಖಾಧಿಕಾರಿ ರಹಸ್ಯವಾಗಿ ಪ್ರಶ್ನಿಸಿದ್ದರು ಎಂದು ಪ್ರಕೃತ ಬೇಲ್‌ನಲ್ಲಿರುವ ವಂಜಾರಾ ಕೋರ್ಟಿಗೆ ತಿಳಿಸಿದರು.
2014ರಲ್ಲಿ ಸಿಬಿಐ ಇಶ್ರತ್ ಜಹಾನ್ ಕೇಸಿನಲ್ಲಿ ಅಮಿತ್ ಶಾ ಅವರಿಗೆ ಅಪರ್ಯಾಪ್ತ ಸಾಕ್ಷ್ಯದ ನೆಲೆಯಲ್ಲಿ ಕ್ಲೀನ್ ಚಿಟ್ ನೀಡಿತ್ತು.
Comments are closed.