ರಾಷ್ಟ್ರೀಯ

2019ರ ಲೋಕಸಭೆ ಚುನಾವಣೆಯಲ್ಲಿ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ ಕಣಕ್ಕೆ?

Pinterest LinkedIn Tumblr


ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಸ್ಪರ್ಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ಹೊಸದಿಲ್ಲಿಯಲ್ಲಿ ಆಡ್ವಾಣಿ ಅವರ ನಿವಾಸಕ್ಕೆ ತೆರಳಿದ್ದ ವೇಳೆ ಪ್ರಧಾನಿ ಈ ಮನವಿ ಮಾಡಿದ್ದಾರೆ. ಎಲ್‌.ಕೆ. ಆಡ್ವಾಣಿ ಗುಜರಾತ್‌ನ ಗಾಂಧಿನಗರವನ್ನು ಸದ್ಯ ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರ ಕ್ಷೇತ್ರದ ಸಂಸದರಾಗಿರುವ ಡಾ| ಮುರಳಿ ಮನೋಹರ ಜೋಶಿ ಅವರನ್ನೂ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಲಾಗುತ್ತದೆ ಎಂದು ಹೇಳಲಾಗಿದೆ. 2014ರ ಚುನಾ ವಣೆ ಬಳಿಕ 75 ವರ್ಷ ಮೀರಿದ ನಾಯಕರಿಗೆ ಕೇಂದ್ರ ಸಂಪುಟದಲ್ಲಿ ಅವಕಾಶ ನೀಡಲಾಗಿಲ್ಲ ಮತ್ತು ‘ಮಾರ್ಗದರ್ಶಿ ಮಂಡಲ್‌’ ಎಂಬ ಸಮಿತಿ ರಚಿಸಿ ಆಡ್ವಾಣಿ, ಜೋಶಿ ಮತ್ತು ಇತರ ನಾಯಕರನ್ನು ಮೂಲೆಗುಂಪು ಮಾಡಲಾಗಿತ್ತು.

ಇಂದು ಉದ್ಧವ್‌ ಭೇಟಿ: ಮುಂದಿನ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಘೋಷಣೆ ಮಾಡಿದ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಜತೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಬುಧವಾರ ಭೇಟಿಯಾಗಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ‘ಬಿಜೆಪಿ ನಮ್ಮ ಅತ್ಯಂತ ದೊಡ್ಡ ಶತ್ರು’ ಎಂದು ಉದ್ಧವ್‌ ಹೇಳಿ ಕೊಂಡಿದ್ದರು. ಗುರುವಾರ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್‌ ಸಿಂಗ್‌ ಬಾದಲ್‌ ರನ್ನು ಶಾ ಭೇಟಿಯಾಗಲಿದ್ದಾರೆ. ಬಿಜೆಪಿ ವಿರುದ್ಧ ಅತೃಪ್ತಿ ಹೊಂದಿರುವ ಮಿತ್ರಪಕ್ಷಗಳನ್ನು ಭೇಟಿಯಾಗಿ ಚುನಾವಣೆ ಎದುರಿಸುವುದಕ್ಕೂ ಮುನ್ನ ಸಂಬಂಧ ಕಾಯ್ದುಕೊಳ್ಳುವ ಯತ್ನ ಇದಾಗಿದೆ.

Comments are closed.