ಲಖನೌ: ಸರಕಾರಿ ಅಧಿಕಾರಿಗಳು ವೇಶ್ಯರಿಗಿಂತಲೂ ಕಡೆ. ಅವರು ಲಂಚ ಕೇಳಿದರೆ, ಜನರು ‘ಗೂಸಾ’ಕೊಡಬೇಕು ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.
ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, ಭ್ರಷ್ಟ ಅಧಿಕಾರಶಾಹಿಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ”ಸರಕಾರಿ ಅಧಿಕಾರಿಗಳಿಗಿಂತ ವೇಶ್ಯೆಯರು ಉತ್ತಮ. ವೇಶ್ಯೆಯರು ಹಣ ಪಡೆದು ಕೆಲಸ ಮಾಡಿ ಮುಗಿಸುತ್ತಾರೆ. ಆದರೆ ಅಧಿಕಾರಿಗಳು ನಮ್ಮಿಂದ ಹಣ ತೆಗೆದುಕೊಂಡ ನಂತರ ಕೆಲಸ ಪೂರ್ತಿಗೊಳಿಸುತ್ತಾರೆ ಎಂಬ ಯಾವ ನಿರೀಕ್ಷೆಯೂ ಇರುವುದಿಲ್ಲ” ಎಂದಿದ್ದಾರೆ.
ಸುರೇಂದ್ರ ಸಿಂಗ್ ಈ ರೀತಿಯ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದು ಇದೆ ಮೊದಲಲ್ಲ. ಕಳೆದ ಫೆಬ್ರವರಿಯಲ್ಲಿ ”ಭಾರತ್ ಮಾತಾ ಕಿ ಜೈ’, ವಂದೇ ಮಾತರಂ’ ಎನ್ನದವರಿಗೆ ಈ ದೇಶದಲ್ಲಿ ವಾಸಿಸಲು ಯಾವುದೇ ಹಕ್ಕಿಲ್ಲ, ಇಂಥವರು ರಾಜಕೀಯ ಪ್ರವೇಶಿಸಲು ಅವಕಾಶ ನೀಡಬಾರದು. ಭಾರತ್ ಮಾತಾ ಕಿ ಜೈ’ ಎನ್ನದವರು ಪಾಕಿಸ್ತಾನಿಗಳು” ಎಂದು ಹೇಳಿದ್ದರು.
ಅಲ್ಲದೆ, ಕಳೆದ ತಿಂಗಳು ಕೈರಾನದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಸಿಎಂ ಯೋಗಿ ಆದಿತ್ಯನಾಥ್ ಸರಕಾರ ಕಾರಣ ಎಂದು ಆರೋಪಿಸಿದ್ದರು.
Comments are closed.