ರಾಷ್ಟ್ರೀಯ

ಉಷ್ಣಾಂಶದ ಏರಿಕೆ: ಶೀಘ್ರ ಕರಗುವ ಮಂಜಿನಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ಥ

Pinterest LinkedIn Tumblr


ಮನಾಲಿ: ಲೇಹ್‌-ಮನಾಲಿ ಸೇರಿದಂತೆ ಹಿಮಾಚಲ ಪ್ರದೇಶದ ಅನೇಕ ಭಾಗಗಳಿಗೆ ಉಷ್ಣಾಂಶದ ಏರಿಕೆಯ ಬಿಸಿ ತಟ್ಟಿದೆ.

ಮನಾಲಿ, ಲಾಹೌಲ್‌, ಕೀಲಂಗ್‌ ಸೇರಿದಾಂತೆ ಇನ್ನಿತರ ಭಾಗಗಳಲ್ಲಿ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್‌ ದಾಟಿರುವ ಪರಿಣಾಮವಾಗಿ ಹಿಮಕರಗಿ ಪ್ರವಾಹ ಭೀತಿ ಉಂಟಾಗಿದೆ. ಲೇಹ್‌ ಹಾಗೂ ಮನಾಲಿ ಹೆದ್ದಾರಿಯೂ ಪ್ರವಾಹದ ಪರಿಣಾಮದಿಂದ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಹೆದ್ದಾರಿಯಲ್ಲಿನ ಕೋಕ್ಸಾರ್‌ ಹಾಗೂ ಸಿಸ್ಸು ಗ್ರಾಮದ ಭಾಗಗಳಲ್ಲಿ ಮಂಗಳವಾರದಿಂದ ಹೆಚ್ಚು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ದೊಡ್ಡದಾದ ಕಲ್ಲು ಬಂಡೆ, ಮರದ ದಿಮ್ಮಿ ಸೇರಿದಂತೆ ಇನ್ನಿತರ ಅವಶೇಷಗಳು ನೀರಿನೊಂದಿಗೆ ಬರುತ್ತಿದೆ. ಇದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಶೀತ ವಾತಾವರಣಕ್ಕೆ ಹೆಸರಾಗಿರುವ ಹಿಮಾಚಲ ಪ್ರದೇಶದ ಅನೇಕ ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ತಾಪಮಾನದಲ್ಲಿ ಏರಿಕೆಯಾಗಿರುವುದರಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಭಾಗಗಳಲ್ಲಿನ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲೂ ಏರಿಕೆಯಾಗಿರುವುದರಿಂದ ಹಿಮಾಚಲ ಪ್ರದೇಶಗಳ ಭಾಗದಲ್ಲಿ ವೇಗವಾಗಿ ಹಿಮ ಕರಗಿ ಪ್ರವಾಹ ಪರಿಸ್ಥಿತಿ ಎದುರಾಗುತ್ತಿದೆ ಎನ್ನಲಾಗಿದೆ.

ಹೆದ್ದಾರಿ ಭಾಗದಲ್ಲಿ ಅನೇಕ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಭಾಗಗಳಲ್ಲಿ ಮಷೀನ್‌ ಹಾಗೂ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅವಶೇಷಗಳನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತಾಪಮಾನ ಹೆಚ್ಚಳ ಆಗುತ್ತಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು 70 ರೋಡ್‌ ಕನ್ಸ್‌ಸ್ಟ್ರಕ್ಷನ್‌ ಕಂಪನಿಯ ಕಮಾಂಡಿಂಗ್ ಆಫಿಸರ್‌ ಬಿಆರ್‌ಒ ಎಲ್‌ಟಿ ಕರ್ನಲ್‌ ವಿಜಯ್‌ ಕುಮಾರ್‌ ತಿಳಿಸಿದ್ದಾರೆ.

Comments are closed.