ಮನೋರಂಜನೆ

ವೀರ್ ದೇ ವೆಡ್ಡಿಂಗ್ ನಲ್ಲಿ ನಟಿಯ ಹಸ್ತಮೈಥುನ ಪಾಕ್ ನಲ್ಲಿ ನಿಷೇಧ, ಅರಬ್’ನಲ್ಲಿ ಸೀನ್ ಕಟ್

Pinterest LinkedIn Tumblr

ಹಸ್ತಮೈಥುನ ದೃಶ್ಯದ ಜೊತೆಗೆ ಹಲವು ಅಶ್ಲೀಲ ಮಾತುಗಳು ಹಾಗೂ ಕಾಮ ಪ್ರಚೋದಿಸುವ ಸೀನ್’ಗಳಿರುವ ಕಾರಣ ನೆರೆಯ ಪಾಕಿಸ್ತಾನ ಚಿತ್ರವನ್ನು ನಿಷೇಧಿಸಿದರೆ, ಅರಬ್ ರಾಷ್ಟ್ರಗಳು ಹಸ್ತಮೈಥುನ ಸೀನ್’ಗೆ ಕತ್ತರಿ ಹಾಕಿದೆ. ಬಾಲಿವುಡ್’ನಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ದೃಶ್ಯಕ್ಕೆ ಅನುಮತಿ ನೀಡಿರುವುದರಿಂದ ಕೆಲವು ಸಂಘಟನೆಗಳು ಬಹಿರಂಗವಾಗಿ ಪ್ರತಿಭಟಿಸಿದರೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್’ಗಳು, ಚರ್ಚೆಗಳು ಬೇಕು ಬೇಡವೆನ್ನುವವರಿಗೆ ಸುದ್ದಿ ಸರಕಾಗಿದೆ.

ಮುಂಬೈ(ಜೂ.07): ಕೆಲವು ದಿನಗಳಿಂದ ಬಾಲಿವುಡ್’ನಲ್ಲಿ ಹೆಚ್ಚು ವಿವಾದ ಸೃಷ್ಟಿಸುತ್ತಿರುವ ಚಿತ್ರ ಶಶಾಂಕ್ ಘೋಷ್ ನಿರ್ದೇಶನದ ವೀರ್ ದೇ ವೆಡ್ಡಿಂಗ್. ನಟಿ ಪ್ರಧಾನ ಹಾಸ್ಯ ಚಿತ್ರವಾಗಿರುವ ವೀರ್ ದೇ ವೆಡ್ಡಿಂಗ್’ನ ಒಂದು ದೃಶ್ಯ ಪರವಿರೋಧ ಚರ್ಚೆಗೀಡು ಮಾಡಿದೆ.

ಜೂ.1ರಂದು ಬಿಡುಗಡೆಯಾದ ವೀರ್ ದೇ ವೆಡ್ಡಿಂಗ್ ಚಿತ್ರದಲ್ಲಿ ಕರೀನಾ ಕಪೂರ್, ಸೋನಮ್ ಕಪೂರ್, ಸ್ವರ ಭಾಸ್ಕರ್ ಸೇರಿದಂತೆ ಪ್ರಮುಖ ತಾರಾ ಮಣಿಗಳೆ ಅಭಿನಯಿಸಿದ್ದಾರೆ. ಹಾಸ್ಯಪ್ರಧಾನ ಚಿತ್ರವಾಗಿರುವ ಕಾರಣ ಬಾಲಿವುಡ್’ನಲ್ಲೂ ಗುಲ್ಲೆಬ್ಬಿಸುತ್ತಿದೆ. ಚಿತ್ರದಲ್ಲಿ ಮುಖ್ಯಪಾತ್ರಧಾರಿಯಾಗಿರುವ ಸ್ವರಭಾಸ್ಕರ್ ಏಕಾಂತದಲ್ಲಿ ಹಸ್ತಮೈಥುನ ಮಾಡಿಕೊಳ್ಳುವ ದೃಶ್ಯ ಚಿತ್ರದಲ್ಲಿದ್ದು ಕೇಂದ್ರ ಸೆನ್ಸಾರ್ ಮಂಡಳಿ ಈ ವಿವಾದಾತ್ಮಕ ದೃಶ್ಯಕ್ಕೆ ಕತ್ತರಿ ಹಾಕದೆ ಎ ಪ್ರಮಾಣಪತ್ರ ನೀಡಿದೆ.

ಹಸ್ತಮೈಥುನ ದೃಶ್ಯದ ಜೊತೆಗೆ ಹಲವು ಅಶ್ಲೀಲ ಮಾತುಗಳು ಹಾಗೂ ಕಾಮ ಪ್ರಚೋದಿಸುವ ದೃಶ್ಯಗಳಿರುವದರಿಂದ ನೆರೆಯ ಪಾಕಿಸ್ತಾನ ಚಿತ್ರವನ್ನು ನಿಷೇಧಿಸಿದರೆ, ಅರಬ್ ರಾಷ್ಟ್ರಗಳು ಹಸ್ತಮೈಥುನ ಸೀನ್’ಗೆ ಕತ್ತರಿ ಹಾಕಿದೆ. ಬಾಲಿವುಡ್’ನಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ದೃಶ್ಯಕ್ಕೆ ಅನುಮತಿ ನೀಡಿರುವುದರಿಂದ ಕೆಲವು ಸಂಘಟನೆಗಳು ಬಹಿರಂಗವಾಗಿ ಪ್ರತಿಭಟಿಸಿದರೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್’ಗಳು, ಚರ್ಚೆಗಳು ಬೇಕು ಬೇಡವೆನ್ನುವವರಿಗೆ ಸುದ್ದಿ ಸರಕಾಗಿದೆ. ವಿವಾದವು ಹಾಗೆ ತಣ್ಣಗಾಗುತ್ತದೆಯೋ ಅಥವಾ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕಿದೆ. ಆದರೆ ಚಿತ್ರರಸಿಕರಂತೂ ಸಿನಿಮಾದ ಜೊತೆ ಟ್ರೋಲ್’ಗಳನ್ನು ಎಂಜಾಯ್ ಮಾಡುತ್ತಿರುವುದು ಸುಳ್ಳಲ್ಲ.

Comments are closed.