ಕರಾವಳಿ

ಉಡುಪಿ: ಸುರಕ್ಷತೆ, ಭದ್ರತೆಗಾಗಿ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಗೃಹ ರಕ್ಷಕರ ನಿಯೋಜನೆ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಸುರಕ್ಷತೆ ಹಾಗೂ ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಹತ್ತು ಟೂರಿಸ್ಟ್ ಮಿತ್ರ ಗೃಹರಕ್ಷಕರನ್ನು ನಿಯೋಜನೆಗೊಳಿಸಿದ್ದು, ಪ್ರಸಕ್ತ ಮಳೆಗಾಲದಲ್ಲಿ ಪ್ರವಾಸಿ ತಾಣಗಳಲ್ಲಿ ಸುರಕ್ಷಿತ ಪ್ರವಾಸೋದ್ಯಮ ವಾತಾವರಣ ಹಾಗೂ ಭದ್ರತಾ ದೃಷ್ಟಿಯಿಂದ ಹೆಚ್ಚುವರಿಯಾಗಿ ಪ್ರವಾಸಿ ಮಿತ್ರ ತರಬೇತಿ ಪಡೆದ ಹತ್ತು ಜನ ಗೃಹರಕ್ಷಕರನ್ನು ಪೋಲಿಸ್ ಮಹಾನಿರ್ದೇಶಕರು ಹಾಗೂ ಮಹಾ ಸಮಾದೇಷ್ಟರು ಗೃಹರಕ್ಷಕ ದಳ, ಬೆಂಗಳೂರು ಇವರು ನಿಯೋಜಿಸಿರುತ್ತಾರೆ.

ಅದರಂತೆ ಜಿಲ್ಲೆಯಲ್ಲಿ ಒಟ್ಟು 20  ಜನ ಪ್ರವಾಸಿ ಮಿತ್ರರವರು ವಿವಿಧ ಪ್ರವಾಸಿ ತಾಣಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ಇವರಿಗೆ ಜಿಲ್ಲಾಡಳಿತದಿಂದ ಮೆಗಾ ಫೋನ್ಗಳನ್ನು ಹಾಗೂ ಕರಾವಳಿ ಪ್ರವಾಸೋದ್ಯಮ ಸಮಿತಿಯ ಮನೋಹರ್ ಶೆಟ್ಟಿರವರು ಪ್ರವಾಸಿ ಮಿತ್ರರವರಿಗೆ ಸಮವಸ್ತ್ರ, ಕ್ಯಾಪ್ ಹಾಗೂ ಬೆಲ್ಟ್‌ಗಳನ್ನು ಕೊಡುಗೆ ನೀಡಿದ್ದು, ಈ ಪರಿಕರಗಳನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ರವರು ವಿತರಣೆ ಮಾಡಿದರು.
ಕುಂದಾಪುರ ಉಪ ವಿಭಾಗಾಧಿಕಾರಿ ಭೂ ಬಾಲನ್, ಅಪರ ಜಿಲ್ಲಾಧಿಕಾರಿ ಅನುರಾಧ, ಎ‌ಎಸ್ಪಿ ಕುಮಾರ್ ಚಂದ್ರ , ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ ಉಪಸ್ಥಿತರಿದ್ದರು.

Comments are closed.