ಕರ್ನಾಟಕ

ಹೆಬ್ಬಾಳದ ರಸ್ತೆ ಅಗಲೀಕರಣ ಕಾಮಗಾರಿ ವೇಳೆ 17ನೇ ಶತಮಾನದ ಶಿಲಾಶಾಸನ ಪತ್ತೆ

Pinterest LinkedIn Tumblr


ಬೆಂಗಳೂರು: ಹೆಬ್ಬಾಳದ ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಮಣ್ಣುಪಾಲಾಗುತ್ತಿದ್ದ 17ನೇ ಶತಮಾನದ ಶಿಲಾಶಾಸನವನ್ನು ಯುವಕರ ಗುಂಪು ರಕ್ಷಿಸಿದೆ.

ಬಿಬಿಎಂಪಿಯಿಂದ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿಯ ವೇಳೆ ಶಿಲಾಶಾಸನ ಹಾಗೂ ವೀರಗಲ್ಲು ಸಿಕ್ಕಿದ್ದು, ಪುರಾತತ್ವ ಇಲಾಖೆ ಇದಕ್ಕೆ ಸೂಕ್ತ ನೆಲೆ ಕಲ್ಪಿಸಲು ಮುಂದಾಗಿದೆ.

ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಹೆಬ್ಬಾಳದ ನಿವಾಸಿ ದಿಲೀಪ್‌ ಕ್ಷತ್ರಿಯ, ರಸ್ತೆ ಬದಿಯಲ್ಲಿ ಪ್ರಾಚೀನ ಕಲ್ಲುಗಳನ್ನು ಗಮಿಸಿದ್ದಾರೆ. ಕುತೂಹಲದಿಂದ ಪರಿಶೀಲಿಸಿದ ದಿಲೀಪ್‌ಗೆ ಇದು ಶಿಲಾ ಶಾಸನ ಎಂಬ ವಿಚಾರ ಮನವರಿಕೆಯಾಗಿ, ರಿವೈವಲ್‌ ಹೆರಿಟೇಜ್‌ ಹಬ್‌ (ಆರ್‌ಎಚ್‌ಎಚ್‌) ಎನ್‌ಜಿಒಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಕಾರ್ಯ ಪ್ರವೃತ್ತರಾದ ಎನ್‌ಜಿಒ ತಂಡ, ಶಿಲಾಶಾಸನವನ್ನು ಪರೀಕ್ಷಿಸಿ, ಕ್ರಿ.ಶ 1689 ಕಾಲಕ್ಕೆ ಒಳಪಟ್ಟಿದ್ದು, ಹೆಬ್ಬಾಳ ಕೆರೆ ನಿರ್ಮಾಣಕ್ಕೆ ಸಂಬಂಧಿಸಿದ ಮಾಹಿತಿ ಸಿಗಬಹುದು. ಈ ಕುರಿತು ಇನ್ನಷ್ಟು ಪರಿಶೀಲನೆ ನಡೆಸುವ ಬಗ್ಗೆ ಎನ್‌ಜಿಒ ಹಾಗೂ ಪುರಾತತ್ವ ತಜ್ಞರು ತಿಳಿಸಿದ್ದಾರೆ.

Comments are closed.