ಕರಾವಳಿ

ಮಂಗಳಾದೇವಿ ದೇವಸ್ಥಾನದ ನಾಗನಕಟ್ಟೆಯಲ್ಲಿದ್ದ ಬೃಹತ್ ಅಶ್ವಥ ಮರದ ಕೊಂಬೆ ಮುರಿದು ಬಿದ್ದು ನಾಲ್ವರಿಗೆ ಗಾಯ

Pinterest LinkedIn Tumblr

ಮಂಗಳೂರು, ಜೂನ್.08; ನಗರದಲ್ಲಿ ಸುರಿಯುತ್ತಿರುವ ಧಾರಕಾರ ಮಳೆ ಪರಿಣಾಮ ಬೃಹತ್ ಅಶ್ವಥ ಮರದ ಕೊಂಬೆ (ಗೆಲ್ಲು) ಮುರಿದು ಬಿದ್ದು ನಾಲ್ವರು ಗಾಯಗೊಂಡ ಘಟನೆ ನಗರದ ಮಂಗಳಾದೇವಿಯಲ್ಲಿ ಇಂದು ಸಂಜೆ ನಡೆದಿದೆ.

ಮಂಗಳೂರಿನ ಇತಿಹಾಸಪ್ರಸಿದ್ದ ಮಂಗಳಾದೇವಿ ದೇವಸ್ಥಾನದಲ್ಲಿ ಸಂಜೆ ಪೂಜೆ ನಡೆಯುತ್ತಿದ್ದ ವೇಳೆ ದೇವಸ್ಥಾನದ ಮುಂಭಾಗದಲ್ಲಿರುವ ನಾಗನಕಟ್ಟೆಯಲ್ಲಿರುವ ಬೃಹತ್ ಅಶ್ವಥ ಮರದ ಕೊಂಬೆ ಮುರಿದು ಬಿದ್ದು ದೇವಸ್ಥಾನದ ಪ್ರವೇಶ ದ್ವಾರದ ಮೇಲ್ಚಾವಣಿಗೆ ಹಾನಿಯಾಗಿದೆ.

ಈ ವೇಳೆ ಸ್ಥಳದಲ್ಲಿದ್ದ ನಾಲ್ವರು ಗಾಯಗೊಂಡಿದ್ದು, ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಹಾಗೂ ಸ್ಥಳೀಯರು ಸೇರಿ ಕಾರ್ಯಾಚರಣೆ ನಡೆಸಿ ಉರುಳಿ ಬಿದ್ದ  ಮರದ ಕೊಂಬೆಯನ್ನು ತೆರವುಗೊಳಿಸಿದ್ದಾರೆ.

Comments are closed.