ರಾಷ್ಟ್ರೀಯ

ಪಂಚತಾರಾ ಹೋಟೆಲ್​ನ ಶೌಚಾಲಯದಲ್ಲಿ ​18 ವರ್ಷದ ಯುವತಿಯ ಶಂಕಾಸ್ಪದ ಸಾವು

Pinterest LinkedIn Tumblr


ನವದೆಹಲಿ: ರಾಷ್ಟ್ರ ರಾಜಧಾನಿಯ ಪಂಚತಾರಾ ಹೋಟೆಲ್​ವೊಂದರ ಕೊಠಡಿಯಲ್ಲಿ ಬಾಯ್​ ಫ್ರೆಂಡ್​ ಜತೆ ತಂಗಿದ್ದ 18 ವರ್ಷದ ಯುವತಿಯ ಮೃತದೇಹ ಪತ್ತೆಯಾಗಿದೆ.

ಶುಕ್ರವಾರ ಬೆಳಗ್ಗೆ ಮಯೂರ ವಿಹಾರ್​ ಹಾಲಿಡೇ ಇನ್​ ಹೋಟೆಲ್​ ಕೊಠಡಿಯ ಶೌಚಾಲಯದಲ್ಲಿ ಯುವತಿಯ ದೇಹ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದೆ. ಯುವತಿ ಹಾಗೂ ಆಕೆಯ ಬಾಯ್​ ಫ್ರೆಂಡ್​ ಇಬ್ಬರೂ ನವದೆಹಲಿಯ ನಿವಾಸಿಗಳಾಗಿದ್ದು ಗುರುವಾರ ಹೋಟೆಲ್​ಗೆ ಚೆಕ್​ ಇನ್​ ಆಗಿದ್ದಾರೆ. ಆದರೆ, ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಶವ ಪತ್ತೆಯಾದ ಬೆನ್ನಲ್ಲೇ ಆಕೆಯ ಬಾಯ್​ ಫ್ರೆಂಡ್​ನನ್ನು ಪೊಲೀಸರು ಬಂಧಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಹೋಟೆಲ್​ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಾಲಕರಿಗೆ ವಿಷಯ ತಿಳಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯುವತಿಯ ದೇಹದಲ್ಲಿ ಯಾವುದೇ ಅನುಮಾನಾಸ್ಪದ ಗುರುತುಗಳು ಕಾಣಿಸಿಲ್ಲ. ಸದ್ಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಗಳು ಬ್ಯೂಟಿ ಪಾರ್ಲರ್​ನಲ್ಲಿ ಕೆಲಸ ಮಾಡುತ್ತಿದ್ದಳು. ಗುರುವಾರ ರಾತ್ರಿ ಸ್ನೇಹಿತೆಯ ಹುಟ್ಟು ಹಬ್ಬ ಇದೆ. ಹಾಗಾಗಿ ಅಲ್ಲಿಗೆ ತೆರಳುತ್ತಿದ್ದೇನೆ ಎಂದು ನಮಗೆ ತಿಳಿಸಿದ್ದಳು ಎಂದು ಯುವತಿಯ ಪೋಷಕರು ಹೇಳಿದ್ದಾರೆ.

ಬಾಯ್​ಫ್ರೆಂಡ್​ ಹೇಳಿದ್ದೇನು?
ನಾನು ಗುರುವಾರ ರಾತ್ರಿಯೇ ರೂಂನಿಂದ ಹೊರಟೆ. ಅದಾದ ನಂತರ ಏನಾಯಿತೆಂಬುದು ನನಗೆ ಗೊತ್ತಿಲ್ಲ. ರಾತ್ರಿ ಎಷ್ಟು ಬಾರಿ ಕರೆ ಮಾಡಿದರೂ ಯುವತಿ ಕರೆ ಸ್ವೀಕರಿಸಲಿಲ್ಲ. ಹಾಗಾಗಿ ಹೋಟೆಲ್​ ಸಿಬ್ಬಂದಿಗೆ ಕರೆ ಮಾಡಿ ಒಮ್ಮೆ ಕೊಠಡಿಯ ಬಳಿ ಹೋಗಿ ನೋಡಿ ಎಂದು ಮಾಹಿತಿ ನೀಡಿದೆ. ಸಿಬ್ಬಂದಿ ಮಾಸ್ಟರ್​ ಕೀಗಳನ್ನು ಬಳಸಿ ಒಳ ಕೊಠಡಿಯ ಒಳಗೆ ಹೋದಾಗ, ಕೊಠಡಿಯ ಶೌಚಾಲಯದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಬಂಧಿತ ತಿಳಿಸಿದ್ದಾನೆ.

Comments are closed.