ಕರ್ನಾಟಕ

ಮಹಿಳೆ ಸ್ನಾನ ಮಾಡುತ್ತಿದ್ದದ್ದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ಇಬ್ಬರ ಬಂಧನ

Pinterest LinkedIn Tumblr

ಬೆಂಗಳೂರು: ಮಹಿಳೆ ಸ್ನಾನ ಮಾಡುತ್ತಿರುವುದನ್ನು ಮೊಬೈಲ್‌ನಲ್ಲಿಚಿತ್ರೀಕರಿಸುತ್ತಿದ್ದ ಆರೋಪದ ಮೇಲೆ ಗುರುಬಸಪ್ಪ (30) ಹಾಗೂ ಮಾರುತಿ (28) ಎಂಬುವರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

‘ಗುರುವಾರ ರಾತ್ರಿ 11.30ರ ಸುಮಾರಿಗೆ ನಾನು ಸ್ನಾನದ ಕೋಣೆಯಲ್ಲಿದ್ದಾಗ ಸಿಗರೇಟಿನ ವಾಸನೆಬರುತ್ತಿತ್ತು. ಎಲ್ಲಿಂದ ವಾಸನೆ ಬರುತ್ತಿದೆ ಎಂದು ಕಿಟಕಿ ಕಡೆ ನೋಡಿದಾಗ, ಸ್ಥಳೀಯ ನಿವಾಸಿ ಗುರು ತನ್ನ ಸ್ನೇಹಿತನೊಂದಿಗೆ ಮೊಬೈಲ್‌ ಹಿಡಿದುಕೊಂಡು ಕುಳಿತಿದ್ದ. ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಚಿತ್ರೀಕರಿಸಿಕೊಂಡಿರುವ ಅವರಿಬ್ಬರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ದೂರು ಕೊಟ್ಟಿದ್ದ 29 ವರ್ಷದ ಮಹಿಳೆ, ‘ಆದಷ್ಟು ಬೇಗ ಅವರನ್ನು ಪತ್ತೆ ಮಾಡಿ, ಆ ವಿಡಿಯೊ ಅಳಿಸಿ ಹಾಕಿ’ ಎಂದೂ ಮನವಿ ಮಾಡಿದ್ದರು.

ಆಕ್ಷೇಪಾರ್ಹ ಚಿತ್ರ ತೆಗೆದ (ಐಪಿಸಿ 354ಸಿ) ಹಾಗೂ ಮಹಿಳೆ ಗೌರವಕ್ಕೆ ಧಕ್ಕೆ ಉಂಟು ಮಾಡಿದ (509) ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ಶುಕ್ರವಾರ ಬೆಳಿಗ್ಗೆ ಇಬ್ಬರನ್ನೂ ಬಂಧಿಸಿದ್ದಾರೆ. ಮಾರುತಿ ಆಟೊ ಚಾಲಕನಾಗಿದ್ದು, ಗುರುಬಸಪ್ಪ ಎಲೆಕ್ಟ್ರೀಷಿಯನ್ ಆಗಿದ್ದಾನೆ.

Comments are closed.