ಕರಾವಳಿ

ಮಂಗಳೂರಿನಲ್ಲಿ ಕೃತಕ ನೆರೆ ಸಂದರ್ಭ ಉತ್ತಮ ಸೇವೆ ಸಲ್ಲಿಸಿದ ಗೃಹರಕ್ಷಕರಿಗೆ ಸನ್ಮಾನ – ಗೃಹರಕ್ಷಕರು ಸಮಾಜದ ಆಸ್ತಿ : ಡಾ| ಚೂಂತಾರು

Pinterest LinkedIn Tumblr

ಮಂಗಳೂರು:ಮಂಗಳೂರಿನಲ್ಲಿ ಕೃತಕ ನೆರೆ ಉಂಟಾದ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ಗೃಹರಕ್ಷಕರನ್ನು ಸನ್ಮಾನಿಸಲಾಯಿತು.

ಮಂಗಳೂರಿನಲ್ಲಿ ಉಂಟಾದ ನೆರೆಯ ಸಂದರ್ಭದಲ್ಲಿ ಪಾಂಡೇಶ್ವರ ಮತ್ತು ಅತ್ತಾವರದ ಬಳಿ ಕೃತಕ ನೆರೆ ಉಂಟಾದಾಗ ಸ್ಥಳೀಯ ವಾಸಿಗಳನ್ನು ಬೋಟ್‍ಗಳ ಮುಖಾಂತರ ಸ್ಥಳಾಂತರ ಮಾಡುವಾಗ ಅಸಾಮಾನ್ಯ ಧೈರ್ಯ, ಪ್ರಸಂಗಾವಧಾನತೆ ಮತ್ತು ಬುದ್ಧಿಮತ್ತೆ ಉಪಯೋಗಿಸಿದ ಗೃಹರಕ್ಷಕರಾದ ಕೇಶವ, ಪ್ರಜ್ವಲ್ ಡಿಸೋಜ ಮತ್ತು ಚೇತನ್ ಕುಮಾರ್ ಇವರನ್ನು ಜಿಲ್ಲಾ ಗೃಹರಕ್ಷಕದಳದ ವತಿಯಿಂದ ಹೂ ಹಣ್ಣು ನೀಡಿ, ಶಾಲು ಹೊದಿಸಿ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಗೌರವಿಸಿದರು.

ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿಯೂ ಎದೆಗುಂದದೆ ಸಾರ್ವಜನಿಕರ ಸೇವೆಗೆ ಕಟ್ಟಿಬದ್ಧರಾದ ಗೃಹರಕ್ಷಕರು ನಿಜವಾಗಿಯೂ ದೇಶದ ಮತ್ತು ಸಮಾಜದ ಆಸ್ತಿ ಎಂದು ಅವರು ಅಭಿಪ್ರಾಯಪಟ್ಟರು. ಉಪಸಮಾದೇಷ್ಟ ರಮೇಶ್, ಘಟಕಾಧಿಕಾರಿ ಮಾರ್ಕ್‍ಶೇರಾ, ಹಿರಿಯ ಗೃಹರಕ್ಷಕ ರಮೇಶ್ ಭಂಡಾರಿ, ಸ್ಟಾಫ್ ಆಫೀಸರ್ ಉಷಾ ಮುಂತಾದವರು ಉಪಸ್ಥಿತರಿದ್ದರು.

Comments are closed.