(File Photo)
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಿಂದ ಮೂಂಬಾಯಿಗೆ ತೆರಳಬೇಕಾಗಿದ್ದ ಏರ್ ಇಂಡಿಯಾ 680 ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿದೆ.12.40ಕ್ಕೆ ಬಾಂಬೆ ಹೊರಡಬೇಕಾಗಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ಸಮಸ್ಯೆಯಿಂದಾಗಿ ಹಾರಾಡದೆ ನಿಂತಿದೆ.
ವಿಮಾನವು ರನ್ವೇಯಲ್ಲಿ ಇದ್ದಾಗಲೇ ಈ ದೋಷ ಕಂಡುಬಂದಿದೆ. ತಂತ್ರಜ್ಞರಿಂದ ವಿಮಾನದ ಪರಿಶೀಲನೆ ಮುಂದುವರಿದಿದ್ದು, ತಂತ್ರಜ್ಞರ ವರದಿ ಬಳಿಕವೇ ಮುಂದಿನ ನಿರ್ಧಾರದ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನವು ಮಧ್ಯಾಹ್ನ 12:40ಕ್ಕೆ ತೆರಳಲು ನಿಗದಿಯಾಗಿತ್ತು. ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನ ಹಾರಾಡದೇ ನಿಂತಿದೆ. ವಿಮಾನದಲ್ಲಿ ಕಂಡುಬಂದ ದೋಷದ ಕುರಿತು ತಂತ್ರಜ್ಞರು ಸಮಗ್ರ ಪರಿಶೀಲನೆ ಕೈಗೊಂಡಿದ್ದು, ವರದಿ ಬಂದ ಬಳಿಕವೇ ಮುಂದಿನ ನಿರ್ಧಾರವನ್ನು ಕೈಗೊಳ್ಳುವುದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
Comments are closed.