ದುಬೈ: ಕೆಲವು ಕರೆನ್ಸಿ ಎಕ್ಸ್ ಚೇಂಜ್ ಸಂಸ್ಥೆಗಳ ಲೈಸೆನ್ಸ್ ಗಳನ್ನು ಯುಎಇ ಸೆಂಟ್ರಲ್ ಬ್ಯಾಂಕ್ ಕೆಳಗಿನ ದರ್ಜೆಗೆ ಇಳಿಸಿದ್ದು, ಈ ಸಂಸ್ಥೆಗಳ ಮೂಲಕ ಹಣ ರವಾನಿಸದಂತೆ ದೇಶದ ನಿವಾಸಿಗಳಿಗೆ ಸೂಚನೆ ನೀಡಿದೆ.
Taher Exchange Est., Al Hadha Exchange, Al Hemriya Exchange, Dubai Express Exchange, Sanaa Exchange, Cosmos Exchange ಹಾಗು Bin Bakheet Exchange Est ನ ಲೈಸೆನ್ಸ್ ಗಳನ್ನು ಬ್ಯಾಂಕ್ ಕೆಳಗಿನ ದರ್ಜೆಗೆ ಇಳಿಸಿದೆ.
“ವೇತನಕ್ಕೆ ಸಂಬಂಧಿಸಿದ ಪಾವತಿಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಂದ ಈ ಮೇಲಿನ ಸಂಸ್ಥೆಗಳ ಲೈಸೆನ್ಸ್ ಗಳನ್ನು ಕೆಳದರ್ಜೆಗೆ ಇಳಿಸಲಾಗಿದೆ. ಕೇಂದ್ರೀಯ ಬ್ಯಾಂಕ್ ನೀಡಿದ್ದ ರಿಯಾಯಿತಿ ಅವಧಿಯಲ್ಲೂ ಸ್ಟೇಟಸನ್ನು ನಿಯಮಿತಗೊಳಿಸಲು ಈ ಸಂಸ್ಥೆಗಳು ವಿಫಲವಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಕೇಂದ್ರೀಯ ಬ್ಯಾಂಕ್ ನ ಪ್ರಕಟನೆ ತಿಳಿಸಿದೆ.
ವಿದೇಶಿ ಕರೆನ್ಸಿಗಳ ಮಾರಾಟ ಹಾಗು ಖರೀದಿಗಳನ್ನು ನಡೆಸಲು ಈ ಸಂಸ್ಥೆಗಳಿಗೆ ಅವಕಾಶವಿದೆ.
Comments are closed.