ಮನೋರಂಜನೆ

ನಟಿ ದೀಪಿಕಾ ಪಡುಕೋಣೆ ಫ್ಲಾಟ್ ನಲ್ಲಿ ಬೆಂಕಿ !

Pinterest LinkedIn Tumblr

ಮುಂಬೈ: ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಅವರು ವಾಸ್ತವ್ಯ ಹೂಡಿದ್ದ ಫ್ಲಾಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಪ್ರಭಾದೇವಿ ನಗರದಲ್ಲಿರುವ 34 ಅಂತಸ್ತಿನ ಬೆಹುಮಂಡೆ ಕಟ್ಟಡದ ಕೊನೆಯ ಅಂತಸ್ತಿನಲ್ಲಿ ಹಠಾತ್ತನೆ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿದಿದೆ. ಈ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಇರಲಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಅವರ ಆಪ್ತರು ತಿಳಿಸಿದ್ದಾರೆ.

ದೀಪಿಕಾ ಪಡುಕೋಣೆ ಈ ಕಟ್ಟಡ ಒಂದು ಅಂತಸ್ತಿನಲ್ಲಿ ವಾಸ್ತವ್ಯ ಹೂಡಿದ್ದು, ಮತ್ತೊಂದು ಅಂತಸ್ತಿನಲ್ಲಿ ಕಚೇರಿ ಹೊಂದಿದ್ದಾರೆ. ಬೆಂಕಿಯಿಂದಾಗಿ ಎರಡು ಅಂತಸ್ತಿಗೂ ಯಾವುದೇ ಹಾನಿಯಾಗಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಮಧ್ಯಾಹ್ನ 2-08 ರ ಸುಮಾರಿನಲ್ಲಿ ಈ ಅಗ್ನಿ ಅವಘಡ ಉಂಟಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 90 ಮಂದಿಯನ್ನು ಸುರಕ್ಷಿತವಾಗಿ ಪಾರು ಮಾಡಿದ್ದಾರೆ .ಯಾರೊಬ್ಬರೂ ಕೂಡಾ ಗಾಯಗೊಂಡಿಲ್ಲ.

ಬೆಂಕಿ ನಂದಿಸಲು 10 ಅಗ್ನಿಶಾಮಕ ವಾಹನ, ಎರಡು ಟ್ರಕ್ , ಐದು ನೀರಿನ ಟ್ಯಾಂಕರ್ ಗಳನ್ನು ಬಳಸಿಕೊಳ್ಳಲಾಗಿತ್ತು, ಕೆಲ ತಾಸುಗಳ ಕಾರ್ಯಾಚರಣೆ ನಂತರ ಬೆಂಕಿ ಹತೋಟಿಗೆ ಬಂದಿದೆ.

Comments are closed.