ಕಲಬುರಗಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನು ಕೊಲೆ ಮಾಡಿ ಬಳಿಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ನಾಟಕವಾಡಿದ್ದ ಆರೋಪಿ ಪತ್ನಿಯನ್ನು ಕಲಬುರಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿನೋದ್ ಪತ್ನಿಯಿಂದಲೇ ಕೊಲೆಯಾದ ವ್ಯಕ್ತಿ. ಶಾಂತಾಬಾಯಿ (35) ಹಾಗೂ ಪ್ರೀಯಕರ ಹೀರಾಸಿಂಗ್ (38) ಬಂಧಿತ ಆರೋಪಿಗಳು. ಕೆಲ ವರ್ಷಗಳ ಹಿಂದೆ ಮನೆಯವರ ಒಪ್ಪಿಗೆಯಂತೆ ವಿನೋದ್ ಹಾಗೂ ಶಾಂತಾಬಾಯಿಗೆ ವಿವಾಹವಾಗಿತ್ತು. ಆದರೆ ಶಾಂತಾಬಾಯಿ ಮದುವೆ ಬಳಿಕ ಹೀರಾಸಿಂಗ್ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಇದಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ.
ಏನಿದು ಪ್ರಕರಣ: ಮೃತ ವಿನೋದ್ ಹಾಗೂ ಹೀರಾಸಿಂಗ್ ಸಂಬಂಧಿಗಳಾಗಿದ್ದು, ಪ್ರತಿನಿತ್ಯ ಇಬ್ಬರು ಮನೆಯಲ್ಲೇ ಕುಡಿಯುತ್ತಿದ್ದರು. ಈ ವೇಳೆ ಶಾಂತಾಬಾಯಿಯೊಂದಿಗೆ ಹೀರಾಸಿಂಗ್ ಆಕ್ರಮ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ಆದರೆ ಕೆಲ ದಿನಗಳ ಹಿಂದೆ ಇಬ್ಬರ ಆಕ್ರಮ ಸಂಬಂಧ ವಿನೋದ್ ಗೆ ತಿಳಿದು ಪತ್ನಿಗೆ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ.
ಮೇ 25 ರಂದು ವಿನೋದ್ ಹಾಗೂ ಹೀರಾಸಿಂಗ್ ಕಂಠಪೂರ್ತಿ ಕುಡಿದಿದ್ದರು. ಈ ವೇಳೆ ಇಬ್ಬರ ನಡುವೆ ಅನೈತಿಕ ಸಂಬಂಧದ ಕುರಿತು ಗಲಾಟೆ ಆರಂಭವಾಗಿದೆ. ಗಲಾಟೆ ತಾರಕಕ್ಕೇರಿದ್ದು, ವಿನೋದ್ ತಲೆಯನ್ನು ಕಲ್ಲಿನಿಂದ ಜಜ್ಜಿ ಹೀರಾಸಿಂಗ್ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಬೈಕ್ ಸಮೇತ ರಸ್ತೆಯ ಮಧ್ಯೆ ಎಸೆದಿದ್ದಾನೆ.
ಶಾಂತಾಬಾಯಿ ಮನೆಗೆ ತೆರಳಿ ಪತಿಯನ್ನು ಕೊಲೆ ಮಾಡಿರುವ ವಿಚಾರ ತಿಳಿಸಿದ್ದಾನೆ. ಆದರೆ ಪತಿ ಕೊಲೆ ಬಗ್ಗೆ ತಿಳಿದ್ರೂ ಕೂಡ ಇಬ್ಬರು ಮನೆಯಲ್ಲೇ ರಾತ್ರಿ ಕಾಲ ಕಳೆದಿದ್ದಾರೆ. ಮರುದಿನ ಬೆಳಗ್ಗೆ ವಿನೋದ್ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಶಾಂತಾಬಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಳು.
ಅಪಘಾತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸಿದ್ದರು. ಈ ವೇಳೆ ಶಾಂತಾಬಾಯಿ ಹಾಗೂ ವಿನೋದ್ ನಡುವೆ ಇದ್ದ ಅನೈತಿಕ ಸಂಬಂಧದ ಮಾಹಿತಿ ತಿಳಿದು ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ. ಪರಿಣಾಮ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ.
ಸದ್ಯ ಇಬ್ಬರನ್ನು ಬಂದಿಸಿರುವ ಆಳಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಿದ್ದಾರೆ.
Comments are closed.