ರಾಷ್ಟ್ರೀಯ

ಮೋಸ್ಟ್‌ ವಾಂಟೆಡ್‌ ಉಗ್ರ ಸಮೀರ್‌ ನನ್ನು ಎನ್‌ಕೌಂಟರ್‌ ಮಾಡಿದ ಸೈನಿಕ ಅಪಹರಣ!

Pinterest LinkedIn Tumblr


ಶ್ರೀನಗರ: ಹಿಜ್ಬುಲ್‌ ಮುಜಾಯಿದ್ದೀನ್‌ ಉಗ್ರ ಸಮೀರ್‌ ಟೈಗರ್‌ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈದ ಸೇನಾ ಪಡೆಯ ಯೋಧನನ್ನು ಅಪಹರಿಸಲಾಗಿದೆ.

ವರದಿಯಾದಂತೆ ಅಪಹರಣಕ್ಕೊಳಗಾದ ಯೋಧ ಔರಂಗಜೇಬ್‌ ಎನ್ನುವವರಾಗಿದ್ದು, ಇವರು ಪೂಂಚ್‌ನ ನಿವಾಸಿಯಾಗಿದ್ದಾರೆ.

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಔರಂಗಜೇಬ್‌ ಅವರನ್ನು ಪುಲ್ವಾಮಾದಿಂದ ಅಪಹರಣ ಮಾಡಲಾಗಿದೆ. ಶಸ್ತ್ರ ಸಜ್ಜಿತ ಉಗ್ರರ ತಂಡ ಗನ್‌ ಪಾಯಿಂಟ್‌ನಲ್ಲಿ ಎಳೆದೊಯ್ದಿದೆ ಎಂದು ತಿಳಿದು ಬಂದಿದೆ.

ಔರಂಗಜೇಬ್‌ ಅವರು 23 ರಾಷ್ಟ್ರೀಯ ರೈಫ‌ಲ್ಸ್‌ಗೆ ಸೇರಿದವರಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮೋಸ್ಟ್‌ ವಾಂಟೆಡ್‌ ಉಗ್ರನಾಗಿದ್ದ ಸಮೀರ್‌ನನ್ನು ಇನ್ನೋರ್ವ ಪ್ರಮುಖ ಉಗ್ರನೊಂದಿಗೆ ಮೇ ತಿಂಗಳಿನಲ್ಲಿ ಹತ್ಯೆಗೈಯಲಾಗಿತ್ತು.

Comments are closed.