ಕರಾವಳಿ

ಪಿಲಿಕುಲದಲ್ಲಿ ನಾಳೆ ಹಣ್ಣುಗಳ ಸಂತೆ – ರಾಜ್ಯದ ವಿವಿಧ ಬಗೆಯ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ

Pinterest LinkedIn Tumblr

ಮಂಗಳೂರು ಜೂನ್ 15 : ಪಿಲಿಕುಳದಲ್ಲಿ ಜನಾಕರ್ಷಣೆಗಾಗಿ ಹಲವಾರು ವಿಶಿಷ್ಠ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಚರಿಸಿಕೊಂಡು ಬರುತಿದ್ದು ಜೂನ್ 16 ಮತ್ತು 17 ರಂದು ತೋಟಗಾರಿಕಾ ಇಲಾಖೆಯ ಸಹಯೋಗದಿಂದ ಪಿಲಿಕುಳದ ಅರ್ಬನ್ ಹಾಥ್‍ನಲ್ಲಿ ‘ಹಣ್ಣುಗಳ ಸಂತೆ’ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ಆಯೋಜಿಸಲಾಗಿದೆ.

ಪರಿಸರದಲ್ಲಿ ದೊರಕುವಂತಹ ವಿವಿಧ ಬಗೆಯ ಹಣ್ಣುಗಳ ಬಗ್ಗೆ ಇಂದಿನ ಯುವ ಜನಾಂಗದಲ್ಲಿ ಅರಿವನ್ನು ಮೂಡಿಸುವುದು ಮತ್ತು ಪರಿಚಯ ಮಾಡಿಸುವುದು ಮತ್ತು ರೈತರಿಗೆ ಆದ್ಯತೆ ಹಾಗೂ ಪ್ರೋತ್ಸಾಹ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಬಗೆಯ ಮಾವು, ಹಲಸು, ಅನಾನಸು, ಪಪ್ಪಾಯಿ, ಇತರೆ ಹಣ್ಣುಗಳು, ಸ್ಥಳೀಯ ಕಾಡು ಹಣ್ಣುಗಳು, ವಿದೇಶಿಯ ಹಣ್ಣುಗಳು, ಹಣ್ಣುಗಳ ಬೀಜ, ಕೃಷಿ ಬೀಜಗಳು, ಅರಣ್ಯ ಸಸಿಗಳು, ವಿವಿಧ ಹಣ್ಣುಗಳ ಖಾದ್ಯ ಮತ್ತು ಪಾನೀಯಗಳ ಪ್ರದರ್ಶನ ಹಾಗೂ ಮಾರಾಟವು ನಡೆಯಲಿರುವುದು. ಮೀನು ಪ್ರಿಯರಿಗೆ ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದಿಂದ ತಾಜಾ ಮೀನುಗಳ ಮತ್ತು ಖಾದ್ಯಗಳ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ‘ಹಣ್ಣುಗಳ ಸಂತೆ’ ಕಾರ್ಯಕ್ರಮದಲ್ಲಿ ಹಲಸಿನ, ಮಾವು ಬೆಳೆಗಾರರ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಗೇರು ನಿರ್ದೇಶನಾಲಯ, ಸಿ.ಪಿ.ಸಿ.ಆರ್.ಐ. ಕಾಸರಗೋಡು, ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ, ಸಾವಯವ ಕೃಷಿಕ ಗ್ರಾಹಕ ಬಳಗ, ಕ್ಯಾಂಪ್ಕೋ, ಕೆ.ಎಂ.ಎಫ್., ಅರಣ್ಯ, ಕೃಷಿ, ತೋಟಗಾರಿಕಾ ಇಲಾಖೆಗಳು ಮತ್ತು ಕೃಷಿ ವಿಜ್ಞಾನ ಕೇಂದ್ರ ಹಾಗೂ ಇತರ ಹಣ್ಣುಗಳ ಉತ್ಪತ್ತಿಗಳ ತಯಾರಕರು ಪಾಲ್ಗೊಂಡು ವಿವಿಧ ಉತ್ಪನ್ನಗಳು, ಹಾಲಿನ ಉತ್ಪನ್ನಗಳು, ಕ್ಯಾಂಪ್ಕೊ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ

ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗವನ್ನು ಪಡೆದುಕೊಳ್ಳಬಹುದು. ‘ಹಣ್ಣುಗಳ ಸಂತೆ’ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಹಾಗೂ ಮಳಿಗೆಗಳಿಗಾಗಿ 7343212817 ಅಥವಾ 7899687937 ನ್ನು ಸಂಪರ್ಕಿಸುವಂತೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ರಾಜ್ಯವಲಯ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Comments are closed.