ಕರಾವಳಿ

ಸಾಧಕರಿಗೆ ಯಾವುದೂ ಕಷ್ಟವಲ್ಲ : ಅವಕಾಶ ದೊರತರೆ ಸಿನಿಮಾ ರಂಗದಲ್ಲಿ ಬೆಳೆಯ ಬಲ್ಲ ಪ್ರತಿಭಾವಂತ ವಿನೋದ್ ಶೆಟ್ಟಿ

Pinterest LinkedIn Tumblr

ಮಂಗಳೂರು : ಸಾಧಕರಿಗೆ ಯಾವುದೂ ಕಷ್ಟವಲ್ಲ ಎಂಬ ಮಾತನ್ನು ಕಾರ್ಯರೂಪದಲ್ಲಿ ತೋರಿಸುತ್ತಿರುವ ಕೆಲವೇ ಕೆಲವು ಪ್ರತಿಭೆಗಳಲ್ಲಿ ಕೆಂಜಾರಿವ ವಿನೋದ್ ಶೆಟ್ಟಿ ಕೂಡ ಒಬ್ಬರು. ವೃತ್ತಿಯಲ್ಲಿ ಉದ್ಯಮಿಯಾಗಿದ್ದರೂ ತನ್ನಲ್ಲಿ ಅಡಗಿರುವ ಪ್ರತಿಭೆ ಮತ್ತು ಸಾಮರ್ಥ್ಯದಿಂದ ಇಂದು ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ನಟನಾಗಿ ಬೆಳೆದು ನಿಂತಿದ್ದಾರೆ.

ದುಬೈಯಲ್ಲಿ ಉದ್ಯಮಿಯಾಗಿ ರುವ ವಿನೋದ್ ಶೆಟ್ಟಿ ಬಜಪೆ ಸಮೀಪದ ಕೆಂಜಾರು ತೋಟಮನೆ ಪ್ರಕಾಶ್ ಶೆಟ್ಟಿ ಮತ್ತು ಪಾರ್ವತಿ ಶೆಟ್ಟಿ ದಂಪತಿಯ ಪುತ್ರ. ಶಾಲಾ ದಿನಗಳಲ್ಲೇ ಅವರಿಗೆ ನಟನೆ ಎಂದೆ ಪಂಚಪ್ರಾಣ. ಉದ್ಯಮ ಮತ್ತು ವೃತ್ತಿ ರಂಗದಲ್ಲಿ ಎಷ್ಟು ಎತ್ತರಕ್ಕೆ ಏರಿದರೂ ಅವರಿಗೆ ನಟನೆ ಮತ್ತು ಕಲೆಯಿಂದ ದೂರ ಉಳಿಯ ಲಾಗುತ್ತಿಲ್ಲ. ಉದ್ಯಮದಲ್ಲಿ ಬ್ಯುಸಿ ಎಂದು ಕಲೆ ಮತ್ತು ತನ್ನ ಆಸಕ್ತಿಯ ಹವ್ಯಾಸವಾಗಿರುವ ಅಭಿನಯವನ್ನು ದೂರ ಮಾಡಿದವರಲ್ಲ. ಊರಿಗೆ ಬಂದಾಗ ಸಿಕ್ಕಿದ ಎಲ್ಲ ಅವಕಾಶವನ್ನು ಬಾಚಿಕೊಂಡು ತನ್ನಲ್ಲಿರುವ ನಟನನ್ನು ಸದಾ ಜೀವಂತ ಇರಿಸಿಕೊಳ್ಳುತ್ತಾ, ಬೆಳೆಸಿಕೊಳ್ಳುತ್ತಾ ಇದ್ದಾರೆ. ಎಷ್ಟೋ ಬಾರಿ ನಟನೆಗೆಂದೇ ದೂರದ ದುಬೈಯಿಂದ ಊರಿಗೆ ಬಂದುದೂ ಇದೆ.

ಹುರಿಗಟ್ಟಿದ ದೇಹದ ಸುಂದರ ಯುವಕನಾಗಿರುವ ಅವರು ಓರ್ವ ಹೀರೋ ಆಗಲು ಬೇಕಾದ ರೀತಿಯಲ್ಲಿ ದೇಹವನ್ನು ಸಿದ್ಧಪಡಿಸಿಕೊಂಡು ಮಿಂಚುತ್ತಿದ್ದಾರೆ. ಒಂದು ನೋಟಕ್ಕೇ ಎಂಥವರನ್ನೂ ಸೆಳೆಯುವಂಥ ಶಕ್ತಿ ಹೊಂದಿರುವ ಅವರು ಅದೇ ಕಾರಣದಿಂದ ರಘು ಶೆಟ್ಟಿ ನಿರ್ದೇಶನದ `ಅರ್ಜುನ್ ವೆಡ್ಸ್ ಅಮೃತಾ’ ಸಿನಿಮಾದಲ್ಲಿ ಒಂದು ಪಾತ್ರ ಗಿಟ್ಟಿಸಿಕೊಂಡು ನಿರ್ದೇಶಕರು ಮತ್ತು ಪ್ರೇಕ್ಷಕರಿಂದ ಶಹಬ್ಬಾಸ್ ಪಡೆದುಕೊಂಡಿದ್ದಾರೆ.

ಆ ಬಳಿಕ `ಅನುಕ್ತ’ ಹೆಸರಿನ ಕನ್ನಡ ಸಿನಿಮಾದಲ್ಲೂ ನಟಿಸಿದ್ದರು. ಈಗ ಮತ್ತೆ ಸೂರಜ್ ಶೆಟ್ಟಿ ನಿರ್ದೇಶನದ `ಅಮ್ಮೆರ್ ಪೊಲೀಸ್’ ಚಿತ್ರದಲ್ಲೂ ಅವರಿಗೆ ಒಂದು ಪಾತ್ರ ಸಿಕ್ಕಿದ್ದು, ಆ ಸಿನಿಮಾ ಸದ್ಯವೇ ಬಿಡುಗಡೆಯಾಗ ಬೇಕಿದೆ.ಇವರಿಗೆ ಇನ್ನಷ್ಟು ಉತ್ತಮ ಅವಕಾಶ ಸಿಕ್ಕಿದರೆ ಕನ್ನಡ ಮತ್ತು ತುಳು ಚಿತ್ರರಂಗಕ್ಕೆ ಓರ್ವ ಪ್ರತಿಭಾನ್ವಿತ ಹಾಗೂ ಸುಂದರ ಹೀರೋ ಸಿಕ್ಕಿದಂತಾದೀತು.

ಎರಡೂ ಭಾಷೆಗಳಿಗೂ ಒಗ್ಗುವ ನಟವಾಗಿರುವ ಅವರು ಅಭಿನಯಕ್ಕಾಗಿ ಎಷ್ಟು ಕಷ್ಟಪಡಲೂ ಸಿದ್ಧರಿದ್ದಾರೆ. ನಟನೆಗಾಗಿ ಯೇ ಅವರು ಊರಿಗೆ ಬರುವುದೂ ಇದೆ. ಒಂದು ರೀತಿಯ ಬದ್ಧತೆಯಿಂದ ಅವರು ನಟನೆಯನ್ನು ಬೆಳೆಸಿಕೊಳ್ಳುತ್ತಿರುವುದು ಮತ್ತು ನಟನೆಗಾಗಿ ಅವರು ಹಾಕುವ ಪರಿಶ್ರಮ ಶ್ಲಾಘನೀಯವಾದುದು. ವಿನೋದ್ ಶೆಟ್ಟಿಗೆ ಉತ್ತಮ ಅವಕಾಶ ಸಿಗಲಿ, ಅವರ ಭವಿಷ್ಯ ಉಜ್ವಲವಾಗಲಿ ಎಂಬುವುದು ಚಿತ್ರಪ್ರೇಮಿಗಳ ಆಶಯ, ಹಾರೈಕೆ.

ವಿನೋದ್ ಶೆಟ್ಟಿ ಅವರು ಪ್ರತಿಭಾವಂತರು. ಉದ್ಯಮಿ, ಸಿನಿಮಾದ ಜತೆಗೆ ಕ್ರೀಡೆ, ಧಾರ್ಮಿಕ , ಸಾಂಸ್ಕೃತಿಕ, ಸಮಾಜ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.ಕಬಡ್ಡಿ ಆಟ ಅಂದರೆ ಅವರಿಗೆ ಬಲು ಇಷ್ಟ. ಊರಿನಲ್ಲಿ ಮಕ್ಕಳಿಗಾಗಿಯೇ ಕಬಡ್ಡಿ ಪಂದ್ಯಾಟ ಆಯೋಜಿಸಿದ್ದೂ ಇದೆ. ಅಮೆಚೂರು ಕಬಡ್ಡಿ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಅವರು ತಾರಿಕಂಬ್ಳ ನವಚೇತನ ಕ್ಲಬ್‌ನ ಮಾಜಿ ಅಧ್ಯಕ್ಷರೂ ಹೌದು. ಕೆಂಜಾರು ಶಕ್ತಿ ಫ್ರೆಂಡ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷ. ಜಪ್ಪಿನಮೊಗರಿನಲ್ಲಿ ಅಯ್ಯಪ್ಪ ಸ್ವಾಮಿ ಸಮಿತಿಯ ಕಾರ್ಯಾಧ್ಯಕ್ಷ ಹೀಗೆ ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಿದವರು. ಸಿನಿಮಾ ನಿರ್ಮಾಣದ ಯೋಜನೆಯೂ ಅವರಲ್ಲಿದೆ.

Comments are closed.