ಕರ್ನಾಟಕ

ಗೌರಿ ಲಂಕೇಶ್ ಹತ್ಯೆ ತನಿಖೆ: SITಯಿಂದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ವಿಚಾರಣೆ

Pinterest LinkedIn Tumblr


ಬೆಂಗಳೂರು: ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಪರಶುರಾಮ ವಾಗ್ಮೋರೆ ಕುಟುಂಬದ ಸದಸ್ಯರಿಗೆ ಹಣಕಾಸು ನೆರವು ಕೋರಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದ ವಿಜಯಪುರ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಾಕೇಶ್‌ ಮಠ ಅವರನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ರಾಕೇಶ್‌ ಅವರೊಂದಿಗೆ ಪರಶುರಾಮ ತಂದೆ ಶಂಕರ್‌ ವಾಗ್ಮೋರೆ ಅವರೂ ರಾಕೇಶ್‌ ಅವರೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ.

ಎಸ್‌ಐಟಿ ಅಧಿಕಾರಿಗಳು ಅವರು ತನಿಖೆ ತೀವ್ರಗೊಳಿಸಿದ್ದು, ಇನ್ನೂ ನಾಲ್ವರ ರೇಖಾ ಚಿತ್ರಗಳನ್ನು ಸಿದ್ದಪಡಿಸಿರುವ ಬಗ್ಗೆ ತಿಳಿದು ಬಂದಿದೆ.

ರಾಕೇಶ್‌ ಮತ್ತು ಪರಶುರಾಮ್‌ ಆತ್ಮೀಯ ಸ್ನೇಹಿತರಾಗಿದ್ದು , ಇಬ್ಬರೂ ಸಂಘಟನೆಯಲ್ಲಿ ಜೊತೆಯಾಗಿ ಗುರುತಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

ತನಿಖೆ ವೇಳೆ ಪ್ರತಿಕ್ರಿಯೆ ನೀಡುವುದಿಲ್ಲ

ಉಪಮುಖ್ಯಮಂತ್ರಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಸುದ್ದಿಗಾಗರು ಪ್ರಶ್ನಿಸಿದಾಗ ‘ಪ್ರಕರಣದ ತನಿಖೆಯಾಗುತ್ತಿದ್ದು ಈ ವೇಳೆ ಪ್ರತಕ್ರಿಯೆ ನೀಡುವುದಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಸಂಶಯಾಸ್ಪದ ಹೇಳಿಕೆಗಳು ಬರುತ್ತಿವೆ. ನಾನು ಯಾವ ಹೇಳಿಕೆಗೂ ಪ್ರತಿಕ್ರಿಯೆ ನೀಡುವುದಿಲ್ಲ. ತನಿಖೆ ಮುಗಿದ ನಂತರದಲ್ಲಿ ಎಲ್ಲವೂ ಗೊತ್ತಾಗುತ್ತದೆ’ ಎಂದರು.

Comments are closed.