ಕರ್ನಾಟಕ

ಅತ್ತೆಯ ಮಗನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದ ಮಗಳನ್ನು ಕೋರ್ಟ್‌ನಲ್ಲೇ ಕೈ ಬಿಟ್ಟ ತಂದೆ

Pinterest LinkedIn Tumblr


ಬೆಂಗಳೂರು: ಅತ್ತೆಯ ಮಗನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದ ಮಗಳನ್ನು ಕೈ ಬಿಡುವುದಾಗಿ ತಂದೆ ಕೋರ್ಟ್‌ನಲ್ಲೇ ಹೇಳುವ ಮೂಲಕ ಪ್ರಕರಣ ಮುಕ್ತಾಯ ಕಂಡಿದೆ.

ಮಗಳು ನಾಪತ್ತೆಯಾಗಿದ್ದಾಳೆಂದು ತಂದೆ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಪೊಲೀಸರು ಬಾಲಕಿಯನ್ನು ಆಕೆಯ ಅತ್ತೆಯ ಮನೆಯಲ್ಲಿ ಪತ್ತೆ ಮಾಡಿ ಕೋರ್ಟ್‌ಗೆ ಕರೆ ತಂದಿದ್ದಾರೆ.

ಅಪ್ಪ ಮತ್ತು ಮಗಳ ಜತೆ ನ್ಯಾಯಾಧೀಶರು ಮಾತುಕತೆ ನಡೆಸಿದ್ದು, ಒಬ್ಬರನ್ನೂ ಒಮ್ಮತಕ್ಕೆ ತರುವ ಪ್ರಯತ್ನ ಫಲಕಾರಿಯಾಗಲಿಲ್ಲ. ತಂದೆಯ ಜತೆ ಹೋಗಲು ಬಯಸುತ್ತಿದ್ದು, ಅತ್ತೆಯ ಮಗನ ಜತೆಯೇ ನನ್ನ ಮದುವೆ ಮಾಡಬೇಕು. ಇಲ್ಲವಾದರೆ ಅತ್ತೆ ಮನೆಗೆ ತೆರಳುತ್ತೇನೆ ಎಂದು ಮಗಳು ಹಠ ಹಿಡಿದಿದ್ದಾಳೆ. ಮಗಳು ನನ್ನ ಜತೆ ಬಂದು ನಾನು ಆಯ್ಕೆ ಮಾಡಿದ ಹುಡುಗನನ್ನು ಮದುವೆಯಾಗಬೇಕು. ಇಲ್ಲವಾದರೆ ಆಕೆ ಮನೆಗೆ ಬರುವುದೇ ಬೇಡ, ಆಕೆಯನ್ನು ಬಿಟ್ಟು ಬಿಡುತ್ತೇನೆ ಎಂದು ತಂದೆ ಪಟ್ಟು ಹಿಡಿದಿದ್ದಾರೆ. ಅತ್ತೆಯ ಮಗನನ್ನೇ ಮದುವೆಯಾಗುವುದಾದರೆ ನನಗೆ ಮಗಳೇ ಬೇಕಾಗಿಲ್ಲ ಎಂದು ತಂದೆ ಸ್ಪಷ್ಟಪಡಿಸಿದ್ದಾರೆ.

ಬಾಲಕಿಯ ತಂದೆಯ ಸೋದರಿ ಕುಟುಂಬವು ಮದುವೆ ಸಂಬಂಧ ಬೆಳೆಸಲು ಬಯಸಿತ್ತು, ಆದರೆ ಬಾಲಕಿಯ ಕುಟುಂಬ ಒಪ್ಪಿರಲಿಲ್ಲ. ಮೇ 17ರಂದು ಕಾಲೇಜಿಗೆ ಹೋಗಿದ್ದ ಬಾಲಕಿ ಮನೆಗೆ ವಾಪಸಾಗಿರಲಿಲ್ಲ. ಹೀಗಾಗಿ ತಂದೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಪೊಲೀಸರು ಜೂನ್‌ 12ರಂದು ಅತ್ತೆಯ ಮನೆಯಲ್ಲಿ ಬಾಲಕಿಯನ್ನು ಪತ್ತೆ ಮಾಡಿ ಹಾಜರುಪಡಿಸಿದ್ದು, ಪ್ರಕರಣದ ವಿಚಾರಣೆ ಮುಂದುವರಿದಿತ್ತು.

ತಂದೆ , ಮಗಳ ಈ ಜಗ್ಗಾಟವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕೋರ್ಟ್‌ ಹಲವು ಭಾರಿ ಸಂಧಾನ ಮಾತುಕತೆಗೆ ಇಬ್ಬರಿಗೂ ಅವಕಾಶ ನೀಡಿತ್ತು. ಆದರೆ ಇಬ್ಬರೂ ಪಟ್ಟು ಸಡಿಲಿಸಲಿಲ್ಲ. ಕೊನೆಗೆ ಬಾಲಕಿಯನ್ನು ಮಳವಳ್ಳಿಯಲ್ಲಿರುವ ಅತ್ತೆಯ ಮನೆಯಲ್ಲಿಯೇ ಬಿಡುವಂತೆ ಕೋರ್ಟ್‌ ಜೂನ್‌ ಹದಿಮೂರರಂದು ಪೊಲೀಸರಿಗೆ ನಿರ್ದೇಶನ ನೀಡಿದೆ.

Comments are closed.