ಕರ್ನಾಟಕ

ಗಲಗಲಿ ಕ್ಷೇತ್ರ ಗೆದ್ದು ಬಾಗಲಕೋಟೆ ಜಿ.ಪಂ ಉಳಿಸಿಕೊಂಡ ಕಾಂಗ್ರೆಸ್‌!

Pinterest LinkedIn Tumblr


ಬಾಗಲಕೋಟೆ: ಜಿದ್ದಾಜಿದ್ದಿನ ಕಣವಾಗಿದ್ದ ಬಾಗಲಕೋಟೆ ಜಿ.ಪಂನ ಗಲಗಲಿ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆಲುವು ಸಾಧಿಸಿದ್ದು ಜಿಲ್ಲಾ ಪಂಚಾಯತನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕಾಂಗ್ರೆಸ್‌ ಅಭ್ಯರ್ಥಿ ಮುಗಿಯಪ್ಪ ಬಸ್ಸಪ್ಪ ದೇವನಾಳ ಅವರು ಬಿಜೆಪಿಯ ಚನ್ನಪ್ಪ ಹಣಮಂತ ಜಮಖಂಡಿ ಅವರನ್ನು ಸೋಲಿಸಿದ್ದಾರೆ.

ಕಾಂಗ್ರೆಸ್‌ ಸದಸ್ಯ ವೆಂಕನಗೌಡ ತಿಮ್ಮನಗೌಡ ಪಾಟೀಲ್‌ ಅವರ ನಿಧನದಿಂದ ಕ್ಷೇತ್ರ ತೆರವಾಗಿತ್ತು. ಮಾಜಿ ಕಾಂಗ್ರೆಸ್‌ ಶಾಸಕ ಜಿ.ಟಿ.ಪಾಟೀಲ್‌ ಮತ್ತು ಹಾಲಿ ಬಿಜೆಪಿ ಶಾಸಕ ಮುರುಗೇಶ ನಿರಾಣಿ ಅವರಿಗೆ ಪ್ರತಿಷ್ಠೆಯ ಕಣವಾಗಿತ್ತು. ಇಬ್ಬರೂ ಭರ್ಜರಿ ಪ್ರಚಾರ ನಡೆಸಿದ್ದರು.

ಜಿ.ಪಂ ಉಳಿಸಿಕೊಂಡ ಕಾಂಗ್ರೆಸ್‌
36 ಸದಸ್ಯ ಬಲದ ಜಿ.ಪಂ.ನಲ್ಲಿ ಕಾಂಗ್ರೆಸ್‌ 17 , ಬಿಜೆಪಿ 18 ಮತ್ತು ರೈತ ಸಂಘದ ಓರ್ವ ಸದಸ್ಯರಿದ್ದರು. ಇದೀಗ ಕಾಂಗ್ರೆಸ್‌ನ ಸಂಖ್ಯೆ 18 ಆಗಿದ್ದು ಜಿ.ಪಂ.ಅಧ್ಯಕ್ಷೆ ವೀಣಾ ಕಾಶಪ್ಪನವರ ಹುದ್ದೆ ಉಳಿದಿದೆ. ಹಿಂದೆ ಬಿಜೆಪಿ ಸದಸ್ಯನ ಗೈರಿನಿಂದ ಕಾಂಗ್ರೆಸ್‌ ಅಧಿಕಾರಕ್ಕೇರಿತ್ತು.

Comments are closed.