ಕರಾವಳಿ

ಕುಂದಾಪುರ: ವೈದ್ಯಕೀಯ ಅಧ್ಯಯನಕ್ಕೆ ಪತ್ನಿಯ ದೇಹದಾನ ಮಾಡಿದ ಪತಿ

Pinterest LinkedIn Tumblr

ಕುಂದಾಪುರ: ಪತ್ನಿಯ ಅಗಲುವಿಕೆಯ ನೋವಿನಲ್ಲೂ ಕೂಡ ಮೃತದೇಹವನ್ನು ಆಸ್ಪತ್ರೆಯ ವೈದ್ಯಕೀಯ ಸಂಶೋಧನೆಯ ವಿದ್ಯಾರ್ಜನೆಗೆ ಪತಿ ಹಸ್ತಾಂತರಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ.

ಕುಂದಾಪುರದ ಹಿರಿಯ ಕಲಾವಿದ ತಂತ್ರಜ್ಞ ಕೆ.ಕೆ. ರಾಮನ್ ಅವರ ಧರ್ಮಪತ್ನಿ ಪ್ರೇಮಾ(65) ಶನಿವಾರ ತಾಲೂಕಿನ ಕೋಟೇಶ್ವರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದರು. ಇವರ ಪತಿ ಕೆ.ಕೆ. ರಾಮನ್ ಅವರು ಪತ್ನಿಯ ಮೃತದೇಹವನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ವೈದ್ಯಕೀಯ ಸಮ್ಶೋಧನೆಯ ವಿದ್ಯಾರ್ಜನೆಯ ಉಪಯೋಗಕ್ಕೆ ನೀಡಿದರು.

ಮೃತ ಪ್ರೇಮಾ ಅವರು ಪತಿ, ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Comments are closed.