ಕರಾವಳಿ

ಸಾಮಾನ್ಯ ಔಷಧ ಅಂಗಡಿಗಳಲ್ಲೂ ಇನ್ನೂ ಮುಂದೆ ಜನರಿಕ್‌ ಔಷಧ’ ಲಭ್ಯ.

Pinterest LinkedIn Tumblr

ನವದೆಹಲಿ: ಜನರಿಕ್‌ ಔಷಧ’ ಇನ್ನು ಸಾಮಾನ್ಯ ಔಷಧ ಅಂಗಡಿಗಳಲ್ಲೂ ಸಿಗಲಿವೆ ಎನ್ನಲಾಗಿದೆ. ಈ ಬಗ್ಗೆ ನಿಯಂತ್ರಣಾಲಯ ದೇಶದ ಎಲ್ಲ ಔಷಧ ಅಂಗಡಿಗಳಲ್ಲೂ ಜನರಿಕ್‌ ಔಷಧ ಮಾರಾಟಕ್ಕೆ ಆದೇಶ ಹೊರಡಿಸಿದೆ.

ಇದೇ ವೇಳೆ ಆದೇಶದಲ್ಲಿ ಔಷಧ ನಿಯಂತ್ರಣ ಮತ್ತು ಔಷಧ ಸಲಹಾ ಸಮಿತಿ ಸಭೆಗಳಲ್ಲಿ ಕೈಗೊಂಡಿರುವ ನಿರ್ಣಯದಂತೆ ಲೈಸೆನ್ಸ್‌ ಪಡೆದು ಸೇವೆ ನೀಡುತ್ತಿರುವ ಎಲ್ಲ ಔಷಧ ಅಂಗಡಿಗಳಲ್ಲಿ ಜನೆರಿಕ್‌ ಔಷಧ ಮಾರಾಟಕ್ಕೆ ಕೇಂದ್ರ ಔಷಧ ನಿಯಂತ್ರಣ ಇಲಾಖೆ  ಆದೇಶ ಹೊರಡಿಸಿದೆ.

ಇದೇ ವೇಳೆ ಗ್ರಾಹಕರಿಗೆ ಈ ಯೋಜನೆ ಲಾಭವಾಗುವ ನಿಟ್ಟಿನಲ್ಲಿ ಎಲ್ಲ ಔಷಧ ಅಂಗಡಿಗಳಲ್ಲಿ ಪ್ರತ್ಯೇಕ ಸೆಲ್ಫ್‌ ಅಥವಾ ರ‍್ಯಾಕ್‌ ಸ್ಥಾಪಿಸಿ ಗ್ರಾಹಕರಿಗೆ ಸುಲಭವಾಗಿ ಕಾಣುವ ಜಾಗದಲ್ಲಿ ಜನೆರಿಕ್‌ ಔಷಧ ಸಂಗ್ರಹಿಸಿ ಮಾರಾಟಕ್ಕೆ ಇಡುವಂತೆ ಸೂಚಿಸಿದೆ. ಸಾಮಾನ್ಯ ಔಷಧಗಳಿಂದ ಪ್ರತ್ಯೇಕಿಸಲ್ಪಟ್ಟ ಜಾಗದಲ್ಲಿಟ್ಟಿರುವ ಜನರಿಕ್‌ ಔಷಧ ಲಭ್ಯತೆ ಕುರಿತು ಔಷಧ ಮಾರಾಟಗಾರರು ಗ್ರಾಹಕರಿಗೆ ಮಾಹಿತಿ ನೀಡುವುದನ್ನೂ ಕಡ್ಡಾಯಗೊಳಿಸುವ ಬಗ್ಗೆ ಕೂಡ ಉಲ್ಲೇಖ ಮಾಡಲಾಗಿದೆ.

Comments are closed.