ಕರ್ನಾಟಕ

ಸಾಲ ಮನ್ನಾಗೆ ಬದ್ಧ; ಮರಳು ಹಾಗೂ ಗಾರ್ಬೇಜ್ ಮಾಫಿಯಾ ವಿರುದ್ಧ ಯಾವುದೇ ಮುಲಾಜಿಗೊಳಗಾಗದೇ ಕಠಿಣ ಕ್ರಮ: ಸಿಎಂ ಕುಮಾರಸ್ವಾಮಿ

Pinterest LinkedIn Tumblr

ಬೆಂಗಳೂರು: ಕಸದ ಸಮಸ್ಯೆ ಬಗೆಹರಿಸಲು ಗಾರ್ಬೇಜ್ ಮಾಫಿಯಾ ಬಿಡುವುದಿಲ್ಲ,ಮರಳು ಮಾಫಿಯ ಮತ್ತು ಕಸದ ಸಮಸ್ಯೆ ಬಗೆ ಹರಿಸಲು ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಕುಮಾರ ಸ್ವಾಮಿ ಮರಳು ಹಾಗೂ ಗಾರ್ಬೇಜ್ ಮಾಫಿಯಾ ವಿರುದ್ಧ ಯಾವುದೇ ಮುಲಾಜಿಗೊಳಗಾಗದೇ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

ಸಾಲಮನ್ನಾಗೆ ಬದ್ದ ಎಂದು ಹೇಳಿರುವ ಕುಮಾರ ಸ್ವಾಮಿ ಮೂರು ತಿಂಗಳ ಕಾಲಾವಕಾಶ ನೀಡಿ, ನಮ್ಮ ಸರ್ಕಾರದ ಕಾರ್ಯ.ವೈಖರಿ ಬಗ್ಗೆ ನಿಮಗೆ ತಿಳಿಯುತ್ತದೆ ಎಂದು ಹೇಳಿದರು.

ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ನಾನು ವಿಶೇಷ ವಿಮಾನದಲ್ಲಿ ಪ್ರಯಾಣಿಸುತ್ತಿಲ್ಲ, ಅದಕ್ಕೆ ಖರ್ಚು ಮಾಡುವ ಹಣವನ್ನು ಯಾವುದಾದೂ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ತೀರ್ನಮಾನಿಸಿದ್ದೇನೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳ ಭದ್ರತೆ ಹಾಗೂ ಬೆಂಗಾವಲು ವಾಹನಗಳ ಸಂಖ್ಯೆ ಕಡಿಮೆ ಮಾಡಿ ಎಂದು ಹೇಳಿದರೇ ಅದಕ್ಕೆ ಅಧಿಕಾರಿಗಳು ಒಪ್ಪುತ್ತಿಲ್ಲ ಎಂದು ಹೇಳಿದ್ದಾರೆ.

ಕೇಂದ್ರದ ಮನವೊಲಿಸಿ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುತ್ತಿದ್ದೇನೆ, ಒಂದು ಕ್ಷಣವನ್ನು ವ್ಯರ್ತ ಮಾಡದೇ ರಾಜ್ಯದ ಅಭಿವೃದ್ಧಿಗಾಗಿ ಚಿಂತಿಸಲು ಪ್ರಯತ್ನಿಸುತ್ತಿದ್ದೇನೆ, ಸಾಲಮನ್ನಾ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಅದಕ್ಕಾಗಿ ಸಂಪನ್ಮೂಲ ಕ್ರೂಢೀಕರಣದ ಅವಶ್ಯಕತೆಯಿದೆ ಎಂದು ಸಿಎಂ ಕುಮಾರ ಸ್ವಾಮಿ ತಿಳಿಸಿದ್ದಾರೆ.

Comments are closed.